ಮನೆಮನೆಗಳಲ್ಲಿ ಧರ್ಮ ಝೇಂಕಾರ ಸಂಕಲ್ಪ: ಸೋದೆ ಶ್ರೀ

ಸೋದೆ ವಾದಿರಾಜ ಮಠದಲ್ಲಿ ನಡೆದ ವಾದಿರಾಜ ವೈಭವೋತ್ಸವದಲ್ಲಿ ಶಿಷ್ಯ ಸಮೂಹದಿಂದ ಗುರುವಂದನೆ ಸ್ವೀಕರಿಸಿದರು.
ಸೋದೆ ವಾದಿರಾಜ ಮಠದಲ್ಲಿ ನಡೆದ ವಾದಿರಾಜ ವೈಭವೋತ್ಸವದಲ್ಲಿ ಶಿಷ್ಯ ಸಮೂಹದಿಂದ ಗುರುವಂದನೆ ಸ್ವೀಕರಿಸಿದರು.
Published on
ಉಡುಪಿ: ವಾದಿರಾಜರ ವೈಭವೋತ್ಸವ ಅಂಗವಾಗಿ ಹೂವಿನಕರೆಯ 1500 ಮನೆಗಳಲ್ಲಿ ಧರ್ಮ ಝೇಂಕಾರ ಭಜನಾ ಅಭಿಯಾನವನ್ನು ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದ್ದು, ಹಳ್ಳಿಗಳಲ್ಲಿ ಮನೆ ಮನೆಗೆ ತೆರಳಿ ತಾಳವನ್ನು ನೀಡುವ ಸಂಕಲ್ಪ ಮಾಡಿದ್ದೇವೆ. ಈ ಮೂಲಕ ವಾದಿರಾಜರ ಕೀರ್ತನೆ ಮತ್ತು ಹರಿದಾಸ ಸಾಹಿತ್ಯ ನಿರಂತರ ಮೊಳಗಬೇಕು ಎಂದು ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಹೇಳಿದರು.
ಹೂವಿನಕೆರೆ ಸೋದೆ ವಾದಿರಾಜ ಮಠದಲ್ಲಿ ನಡೆದ ವಾದಿರಾಜ ವೈಭವೋತ್ಸವದಲ್ಲಿ ಶಿಷ್ಯ ಸಮೂಹದಿಂದ ಗುರುವಂದನೆ ಸ್ವೀಕರಿಸಿ ಅಶೀರ್ವಚನ ನೀಡಿದರು.
ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಯಬೇಕು. ಧರ್ಮ ಜಾಗೃತಿ ಉಂಟಾಗಬೇಕು ಎಂಬ ವಾದಿರಾಜ ಆಶಯಕ್ಕೆ ಪೂರಕವಾಗಿ ಭಜನಾ ಅಭಿಯಾನವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುತ್ತಿದೆ ಎಂದು ಶ್ರೀಗಳು ಹೇಳಿದರು.
ಪ್ರತಿ ವರ್ಷ ವೈಭವೋತ್ಸವ
ವಾದಿರಾಜರ ಜನ್ಮಸ್ಥಳದಲ್ಲಿ ಪ್ರಥಮ ಬಾರಿಗೆ ವೈಭವವೋತ್ಸವ ಪ್ರಾರಂಭಿಸಲಾಗಿದ್ದು, ಮುಂದಿನ ವರ್ಷ ಸೋದೆಯಲ್ಲಿ ತ್ರಿವಿಕ್ರಮ ದೇವರ ಜಾತ್ರೆ ಹಾಗೂ ವಾದಿರಾಜರ ವೃಂದಾವನ ಸನ್ನಿಧಿ ಬ್ರಹ್ಮಕಲಶೋತ್ಸವ ಜೊತೆಗೆ ವೈಭವೋತ್ಸವ ನಡೆಯಲಿದೆ. 3 ಮತ್ತು 4ನೇ ವೈಭವೋತ್ಸವ ಕೃಷ್ಣ ಮಠದಲ್ಲಿ ಸೋದೆ ಪರ್ಯಾಯ ಸಂದರ್ಭದಲ್ಲಿ ಜರಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸೋದೆ ಶ್ರೀಗಳಿಂದ ಸ್ವಾಪ್ನವೃಂದಾವನಾಖ್ಯಾನ ಮಂಗಳ ಪ್ರವಚನ ನಡೆಯಿತು. ವಿದ್ವಾನ್​ ಬೆ.ನಾ ವಿಜಯೀಂದ್ರ ಆಚಾರ್ಯ ಹಾಗೂ ಉತ್ತನೂರು ಶ್ರೀನಿಧಿ ಆಚಾರ್ಯ ಉಪನ್ಯಾಸ ನೀಡಿದರು. ವಿಜಯನಗರ ರಾಜವಂಶಸ್ಥ ಹಾಗೂ ಆನೆಗೊಂದಿ ಸಂಸ್ಥಾನದ ಕೃಷ್ಣದೇವರಾಯ ಮುಖ್ಯ ಅತಿಥಿಗಳಾಗಿದ್ದರು. ಸೋದೆ ಶ್ರೀಗಳ 35ನೇ ಜನ್ಮನಕ್ಷತ್ರ ಅಂಗವಾಗಿ ಶಿಷ್ಯವೃಂದದಿಂದ ಗುರುವಂದನೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net