ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಫಾ.ಆಂಡ್ರು ಲಿಯೋ ಡಿಸೋಜ ಮಾತನಾಡಿದರು. ಪ್ರಮುಖರಾದ ಕುಮಾರ್ ಬಿ.ಆರ್., ಶಶಿಧರ್ ಪೊಯ್ಯತ್ತಬೈಲ್, ಸಿರಿಲ್ ರಾಬರ್ಟ್ ಡಿಸೋಜ ಮತ್ತಿತರರಿದ್ದರು.
ಕಾರ್ಮಿಕರ ಅಭಿವೃದ್ಧಿ ಉದ್ದೇಶದಿಂದ ಧರ್ಮಗುರುಗಳ ಪ್ರೇರಣೆಯಿಂದ ಆರಂಭಗೊಂಡಿರುವ ಮ್ಯಾಕೊ ಸೊಸೈಟಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ ಎಂದು ಪೆರ್ಮನ್ನೂರು ಸಂತ ಸೆಬಾಸ್ಟಿಯನ್ ಚರ್ಚ್ ಧರ್ಮಗುರು ಫಾ.ಆಂಡ್ರು ಲಿಯೋ ಡಿಸೋಜ ಹೇಳಿದರು.
ದ.ಕ. ಜಿಲ್ಲಾ ಕಾರ್ಮಿಕ ಇಲಾಖೆ, ಮಂಗಳೂರು ಆಟೋರಿಕ್ಷಾ ಮತ್ತು ಕಾರು-ಚಾಲಕರ ಸಹಕಾರಿ ಸಂಘದಿಂದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಘಟಕ, ರಿಚಲ್ ಚಾರಿಟೆಬಲ್ ಟ್ರಸ್ಟ್ ರಿಚಲ್ ಸರ್ವಿಸ್ ತೊಕ್ಕೊಟ್ಟು ಸಹಕಾರದಲ್ಲಿ ಕಾರ್ಮಿಕ ಇಲಾಖೆಯಿಂದ ಶನಿವಾರ ತೊಕ್ಕೊಟ್ಟಿನಲ್ಲಿ ನಡೆದ ಕಾರ್ಮಿಕ ಸಾರಿಗೆ ಮೋಟಾರ್ ವಾಹನ ಭದ್ರತೆ ಮಾಹಿತಿ ಶಿಬಿರ ಹಾಗೂ ನೋಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಂಗಳೂರು ಕಾರ್ಮಿಕಾಧಿಕಾರಿ ಕುಮಾರ್ ಬಿ.ಆರ್. ಮಾತನಾಡಿದರು. ರಿಚಲ್ ಚಾರಿಟೆಬಲ್ ಟ್ರಸ್ಟ್ ಮತ್ತು ರಿಚಲ ಸರ್ವಿಸ್ ನಿರ್ದೇಶಕ ಸಿರಿಲ್ರ ರಾಬರ್ಟ್ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಳ್ಳಾಲ ತಾಲೂಕು ಅಧ್ಯಕ್ಷ ಶಶಿಧರ್ ಪೊಯ್ಯತ್ತಬೈಲ್, ಮ್ಯಾಕೊ ಸೊಸೈಟಿ ಉಪಾಧ್ಯಕ್ಷ ಸಿರಿಲ್ ಡಿಸೋಜ, ವಾಹನ ಮಾಲಕ-ಚಾಲಕರ ಸಂಘದ ಅಧ್ಯಕ್ಷ ಭಗವನ್ ದಾಸ್ ತೊಕ್ಕೊಟ್ಟು ಮೊದಲಾದವರಿದ್ದರು. ಭಾಸ್ಕರ ರಾವ್ ಸ್ವಾಗತಿಸಿದರು. ಡೆಮಿಟ್ರಿಯಸ್ ಡಿಸೋಜ ನಿರೂಪಿಸಿದರು.
ಸ್ಮಾರ್ಟ್ ಕಾರ್ಡ್ ಯೋಜನೆ 20 ವರ್ಷಗಳ ಹಿಂದೆಯೇ ಬಂದಿದ್ದು, ಆ ದಿನಗಳಲ್ಲಿ ಕೇವಲ ಚಾಲಕರಿಗೆ ಮಾತ್ರ ನೀಡಲಾಗುತ್ತಿತ್ತು. ಬಳಿಕ ಯೋಜನೆ ವಿಸ್ತರಿಸಿ 20 ವಲಯಗಳ ಕಾರ್ಮಿಕರಿಗೆ ನೀಡಲಾಗುತ್ತಿದೆ. ಈ ಶ್ರಮ್ ಕಾರ್ಡ್‌ಗೆ 390 ವಲಯಗಳನ್ನು ಗುರುತಿಸಲಾಗಿದೆ.