ಜಾನುವಾರುಗಳಿಗೆ ಅಗತ್ಯವಿರುವ ಆಹಾರ, ಲವಣ ಮಿಶ್ರಣ ಹಾಗೂ ವಿವಿಧ ಔಷಧಗಳನ್ನು ಇದೇ ಕಟ್ಟಡದಲ್ಲಿ ಸಂಗ್ರಹಿಸಲಾಗುತ್ತಿದೆ. ಮಳೆ ನೀರು ಕಟ್ಟಡದ ಒಳಗೆ ಹರಿದು ಇವು ಹಾಳಾಗುವ ಭೀತಿ ಇದೆ. ಅಲ್ಲದೆ ಸೊಸೈಟಿಯ ಕಂಪ್ಯೂಟರ್‌ಗಳು, ಪ್ರಮುಖ ದಾಖಲೆಗಳು ಹಾಗೂ ಇತರ ಅಮೂಲ್ಯ ವಸ್ತುಗಳಿಗೆ ಮಳೆ ನೀರು ತಾಗಿ ಹಾನಿಯಾಗುತ್ತಿರುವುದು ಸಿಬ್ಬಂದಿ ಮತ್ತು ಸದಸ್ಯರ ಆತಂಕ ಮತ್ತಷ್ಟು ಹೆಚ್ಚಿಸಿದೆ.