ಗ್ರಾಮವಿಕಾಸ ಯೋಜನೆಯಿಂದ ಸಮಾಜಮುಖಿ ಕಾರ್ಯ

ಮೂರು ಕಾವೇರಿ ಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆದ ನೇತ್ರ ಉಚಿತ ತಪಾಸಣೆ, ಉಚಿತ ಕನ್ನಡಕ ವಿತರಣಾ ಶಿಬಿರ ನಡೆಯಿತು. ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಜಿತ್, ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮೊದಲಾದವರಿದ್ದರು.
ಮೂರು ಕಾವೇರಿ ಮಹಾಮ್ಮಾಯಿ ದೇವಸ್ಥಾನದಲ್ಲಿ ನಡೆದ ನೇತ್ರ ಉಚಿತ ತಪಾಸಣೆ, ಉಚಿತ ಕನ್ನಡಕ ವಿತರಣಾ ಶಿಬಿರ ನಡೆಯಿತು. ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಜಿತ್, ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂದೀಪ್ ಶೆಟ್ಟಿ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳು ನಡೆಯುತ್ತಿದ್ದು, ಜನರಿಂದ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಜಿತ್ ಹೇಳಿದರು.
ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಚಾರಿಟೇಬಲ್ ಟ್ರಸ್ಟ್, ಕಿನ್ನಿಗೋಳಿ ರೋಟರಿ ಕ್ಲಬ್, ಕಲ್ಲಮುಂಡ್ಕೂರು ನಿಡ್ದೋಡಿ ಲಯನ್ಸ್ ಕ್ಲಬ್, ಮೂರುಕಾವೇರಿ ಮಹಾಮ್ಮಾಯಿ ಆಡಳಿತ ಸಮಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ, ಡಾ.ಪಿ.ದಯಾನಂದ ಪೈ, ಪಿ.ಸತೀಶ್ ಪೈ ಚಾರಿಟೆಬಲ್ ಎಸ್ಪಿಲೋ ವಿಷನ್ ೌಂಡೇಶನ್, ಬೆಂಗಳೂರು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರ ಜ್ಯೋತಿ ಚಾರಿಟೆಬಲ್ ಟ್ರಸ್ಟ್ ಸಹಯೋಗದಲ್ಲಿ ಒಡಿಯೂರು ಶ್ರೀಗಳ ಜನ್ಮದಿನೋತ್ಸವದ ಪ್ರಯುಕ್ತ ಮೂರು ಕಾವೇರಿ ಮಹಾಮ್ಮಾಯಿ ದೇವಸ್ಥಾನದಲ್ಲಿ ನೇತ್ರ ಉಚಿತ ತಪಾಸಣೆ, ಉಚಿತ ಕನ್ನಡಕ ವಿತರಣಾ ಶಿಬಿರದಲ್ಲಿ ಮಾತನಾಡಿದರು.
ನಿಡ್ಡೋಡಿ ಕಲ್ಲಮುಂಡ್ಕೂರು ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಸಂದೀಪ್ ಶೆಟ್ಟಿ, ಒಡಿಯೂರು ಕ್ಷೇತ್ರದ ಸಂಸ್ಕಾರೋತ್ಸವ ಸಮಿತಿ ಸದಸ್ಯ ಗಣೇಶ್ ಅತ್ತಾವರ, ಒಡಿಯೂರು ಗ್ರಾಮ ವಿಕಾಸ ಯೋಜನೆ ಮೇಲ್ವಿಚಾರಕಿ ಸುಮಿತ್ರಾ, ಕಿನ್ನಿಗೋಳಿ ರೋಟರಿ ಕ್ಲಬ್ ನಿಯೋಜಿತ ಅಧ್ಯಕ್ಷ ಪ್ರವೀಣ್ ಸಾಲಿಯಾನ್, ಪ್ರಸಾದ್ ನೇತ್ರಾಲಯ ವೈದ್ಯೆ ಡಾ.ಶಿಲ್ಪಾ, ಘಟ ಸಮಿತಿ ಅಧ್ಯಕ್ಷ ಅಭಿಲಾಷ್, ಕಿನ್ನಿಗೋಳಿ ಪಪಂ ಸದಸ್ಯ ಚಂದ್ರ ರಾಣ್ಯ, ರಾಣ್ಯ ಸಮಾಜ ಅಧ್ಯಕ್ಷ ಮೋಹನ್ ರಾಣ್ಯ ಮತ್ತಿತರರು ಉಪಸ್ಥಿತರಿದ್ದರು. ಒಡಿಯೂರು ಗ್ರಾಮ ವಿಕಾಸ ಸಮಿತಿ ಸಂಯೋಜಕಿ ಶುಭಲತಾ ಶೆಟ್ಟಿ ನಿರೂಪಿಸಿದರು. ಸೇವಾ ದೀಕ್ಷಿತೆ ಸುರೇಖಾ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net