ಸೇವಾಂಜಲಿ ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

  ಕ್ಷಯ ರೋಗಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಡಾ.ಗೋವರ್ಧನ ರಾವ್, ಕೃಷ್ಣ ಕುಮಾರ್ ಪೂಂಜ, ಉಮಾ ಗೋವರ್ಧನ್ ರಾವ್ ಮೊದಲಾದವರಿದ್ದರು.
ಕ್ಷಯ ರೋಗಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಣೆ ಕಾರ್ಯಕ್ರಮ ನಡೆಯಿತು. ಡಾ.ಗೋವರ್ಧನ ರಾವ್, ಕೃಷ್ಣ ಕುಮಾರ್ ಪೂಂಜ, ಉಮಾ ಗೋವರ್ಧನ್ ರಾವ್ ಮೊದಲಾದವರಿದ್ದರು.
Published on
ಬಂಟ್ವಾಳ: ಸಂಕಷ್ಟದ ಕಾಲದಲ್ಲಿ ಕ್ಷಯ ರೋಗಿಗಳ ಕೈ ಹಿಡಿಯುವ ಕಾರ್ಯವನ್ನು ಕೇಂದ್ರ ಸರಕಾರದ ಮಾಡುತ್ತಿದ್ದು ಸೇವಾಂಜಲಿ ಸಂಸ್ಥೆ ಅದನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದೆ. ಸೇವಾಂಜಲಿಯ ಈ ಸೇವಾ ಕಾರ್ಯ ಸದ್ಭಳಕೆಯಾಗಬೇಕು ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಂ ಪೂಜಾರಿ ಹೇಳಿದರು.
ಕೇಂದ್ರ ಸರ್ಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗೃಹದಲ್ಲಿ ಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಿ ಮಾತನಾಡಿದರು.
ಕೈಕಂಬದ ಸೂರ್ಯವಂಶ ಫೌಂಡೇಶನ್ ಅಧ್ಯಕ್ಷ ಡಾ.ಗೋವರ್ಧನ ರಾವ್ ಮಾತನಾಡಿ, ಸಮಾಜದಲ್ಲಿ ಉಳ್ಳವರು ಬಡವರಿಗೆ ನೀಡಿದಾಗ ಬಡತನ ನಿರ್ಮೂಲನವಾಗಲು ಸಾಧ್ಯವಿದೆ. ಅಂಥ ಕಾರ್ಯ ಕೃಷ್ಣ ಕುಮಾರ್ ಪೂಂಜ ಮಾಡುತ್ತಿದ್ದಾರೆ ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾ ಗೋವರ್ಧನ್ ರಾವ್, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ನಾರಾಯಣ, ಪ್ರಮುಖರಾದ ದೇವದಾಸ್ ಶೆಟ್ಟಿ, ಪ್ರಶಾಂತ್ ತುಂಬೆ, ಪದ್ಮನಾಭ ಶೆಟ್ಟಿ, ಶಿವರಾಜ್, ಸುಜೀರ್‌ಮೋಹನ್, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net