ಸಂಘ-ಸಂಸ್ಥೆಯಿಂದ ಸಮಾಜಮುಖಿ ಕಾರ್ಯ

 ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ವಿನಾಯಕ್ ಭಟ್ ಮಾತನಾಡಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಎಜೆ ಆಸ್ಪತ್ರೆ ಡಾ.ಮಾಲಾಶ್ರೀ, ಡಾ.ಅಕ್ಷಯ್ ಶೆಟ್ಟಿ ಇದ್ದರು.
ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಉಚಿತ ಶಿಬಿರದಲ್ಲಿ ವಿನಾಯಕ್ ಭಟ್ ಮಾತನಾಡಿದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಎಜೆ ಆಸ್ಪತ್ರೆ ಡಾ.ಮಾಲಾಶ್ರೀ, ಡಾ.ಅಕ್ಷಯ್ ಶೆಟ್ಟಿ ಇದ್ದರು.
Published on
ಗುರುಪುರ: ಸಮಾಜಮುಖಿ ಕಾರ್ಯ ಗ್ರಾಮೀಣ ಭಾಗದ ಬಡ ಜನರ ಆರೋಗ್ಯಕ್ಕೆ ಆಸರೆಯಾಗಲಿದೆ. ಆಧುನಿಕ ಕಾಲಘಟ್ಟದಲ್ಲಿ ಜನರ ಆರೋಗ್ಯದ ಕಾಳಜಿಯಿಂದ ಸಂಘ-ಸಂಸ್ಥೆಗಳಿಂದ ಇಂತಹ ಕೆಲಸಗಳ ಅಗತ್ಯವಿದೆ ಎಂದು ಗುರುಪುರ ಶ್ರೀ ಸತ್ಯದೇವತಾ ಸೇವಾ ಟ್ರಸ್ಟ್ ವಿನಾಯಕ್ ಭಟ್ ಹೇಳಿದರು.
ವಿಶ್ವ ಹಿಂದೂ ಪರಿಷತ್ ಬಜರಂಗದಳ, ಮಾತೃಶಕ್ತಿ ದುರ್ಗಾವಾಹಿನಿ ವಜ್ರದೇಹಿ ಘಟಕ, ಎಜೆ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ, ಎಜೆ ರಕ್ತ ಕೇಂದ್ರದ ಮಂಗಳೂರು ಸಹಯೋಗ, ಗುರುಪುರ ಶ್ರೀ ಸತ್ಯದೇವತಾ ಸೇವಾ ಟ್ರಸ್ಟ್ ಸಹಕಾರದಲ್ಲಿ ಭಾನುವಾರ ಗುರುಪುರ ಕುಕ್ಕುದಕಟ್ಟೆಯ ಶ್ರೀ ವೈದ್ಯನಾಥ ಸಮುದಾಯ ಭವನದಲ್ಲಿ ರಕ್ತದಾನ, ಆರೋಗ್ಯ ತಪಾಸಣೆ ಉಚಿತ ಶಿಬಿರ ಉದ್ಘಾಟಿಸಿ ಮಾತನಾಡಿದರು.
ವಿಹಿಂಪ ಜಿಲ್ಲಾ ಕಾರ್ಯದರ್ಶಿ ರವಿ ಅಸೈಗೋಳಿ, ಎಜೆ ಆಸ್ಪತ್ರೆ ಡಾ.ಮಾಲಾಶ್ರೀ, ಡಾ.ಅಕ್ಷಯ್ ಶೆಟ್ಟಿ ಮಾತನಾಡಿದರು. ವಿಹಿಂಪ ಜಿಲ್ಲಾ ಸೇವಾ ಪ್ರಮುಖ್ ದೀಪಕ್ ಮರೋಳಿ ಅವರನ್ನು ಸನ್ಮಾನಿಸಲಾಯಿತು. ವಿಹಿಂಪ ಗುರುಪುರ ಪ್ರಖಂಡ ಸೇವಾ ಪ್ರಮುಖ್ ನವೀನ್ ಆದ್ಯಪಾಡಿ, ವಿಹಿಂಪ ಗುರುಪುರ ಘಟಕ ಅಧ್ಯಕ್ಷ ನಾಗೇಶ್ ಕೊಟ್ಟಾರಿ, ಅಂಕಿತಾ ಉಪಸ್ಥಿತರಿದ್ದರು. ಸತ್ಸಂಗ ಘಟಕದ ಜಿಲ್ಲಾ ಪ್ರಮುಖ್ ವಸಂತ ಸುವರ್ಣ ಗುರುಪುರ ವಂದಿಸಿದರು. ವಿಹಿಂಪ ಬಜರಂಗದಳ ಪದಾಧಿಕಾರಿಗಳು ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net