ಸಮಾಜ ಕಲ್ಯಾಣ ರೆಡ್‌ಕ್ರಾಸ್ ಉದ್ದೇಶ

 ಹೆಬ್ರಿ ತಾಲೂಕಿನಲ್ಲಿ ರೆಡ್‌ಕ್ರಾಸ್ ಸೊಸೈಟಿ ಸ್ಥಾಪಿಸಲು ಹೆಬ್ರಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಡಾ.ಅಶೋಕ್ ಕುವಾರ್ ವೈ.ಜಿ., ಬಾಲಚಂದ್ರ ಮುದ್ರಾಡಿ, ಇಂದಿರಾ ಬಾಯರಿ ಮುದ್ರಾಡಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಹೆಬ್ರಿ ತಾಲೂಕಿನಲ್ಲಿ ರೆಡ್‌ಕ್ರಾಸ್ ಸೊಸೈಟಿ ಸ್ಥಾಪಿಸಲು ಹೆಬ್ರಿಯಲ್ಲಿ ಶನಿವಾರ ಪೂರ್ವಭಾವಿ ಸಭೆ ನಡೆಯಿತು. ಪ್ರಮುಖರಾದ ಡಾ.ಅಶೋಕ್ ಕುವಾರ್ ವೈ.ಜಿ., ಬಾಲಚಂದ್ರ ಮುದ್ರಾಡಿ, ಇಂದಿರಾ ಬಾಯರಿ ಮುದ್ರಾಡಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Published on
ಹೆಬ್ರಿ: ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಭಾರತದ ಪ್ರಮುಖ ಸ್ವಯಂಸೇವೆ, ವಾನವೀಯ ಸೇವಾ ಸಂಸ್ಥೆಯಾಗಿದೆ. ಸಮಾಜ ಕಲ್ಯಾಣ ರೆಡ್ ಕ್ರಾಸ್ ಮುಖ್ಯ ಉದ್ದೇಶವಾಗಿದೆ. ಶ್ರೀ ಹೆಬ್ರಿ ತಾಲೂಕು ರೆಡ್‌ಕ್ರಾಸ್ ಸೊಸೈಟಿ ಸ್ಥಾಪನೆಯಾಗಲಿ ಎಂದು ಉಡುಪಿ ಜಿಲ್ಲಾ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಡಾ.ಅಶೋಕ್ ಕುಮಾರ್ ವೈ.ಜಿ. ಹೇಳಿದರು.
ಹೆಬ್ರಿ ತಾಲೂಕಿನಲ್ಲಿ ರೆಡ್‌ಕ್ರಾಸ್ ಸೊಸೈಟಿ ಸ್ಥಾಪಿಸಲು ಹೆಬ್ರಿಯಲ್ಲಿ ಶನಿವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರ್ ಮಾತನಾಡಿದರು. ಹೆಬ್ರಿ ತಾಲೂಕುಮಟ್ಟದ ರೆಡ್‌ಕ್ರಾಸ್ ಸೊಸೈಟಿ ಚೇರ್ಮನ್ ಆಗಿ ಮೂರು ವರ್ಷದ ಅವಧಿಗೆ ವೀಣಾ ಆರ್.ಭಟ್ ಅವರನ್ನು ಆಯ್ಕೆ ವಾಡಲಾಯಿತು. ಚೇರ್ಮನ್ ವೀಣಾ ಆರ್.ಭಟ್, ವೈಸ್ ಚೇರ್ಮನ್ ಡಾ.ವಿದ್ಯಾಧರ ಹೆಗ್ಡೆ, ಕಾರ್ಯದರ್ಶಿ ಪ್ರಶಾಂತ್ ಪೈ ಮುದ್ರಾಡಿ, ಕೋಶಾಧಿಕಾರಿ ಪ್ರಕಾಶ ಶೆಟ್ಟಿ ಕಲ್ಲಿಲು ಅವರಿಗೆ ಶುಭ ಹಾರೈಸಲಾಯಿತು.
ಬಾಲಚಂದ್ರ ಮುದ್ರಾಡಿ, ಇಂದಿರಾ ಬಾಯರಿ ಮುದ್ರಾಡಿ, ಪ್ರಸಾದ್ ಶೆಟ್ಟಿ, ಪ್ರದೀಪ್ ಭಟ್, ಪ್ರವೀಣ್ ಶೆಟ್ಟಿ, ಪಿ.ವಿ.ಆನಂದ ಾಲಿಗ್ರಾಮ, ಸುನೀತಾ ಅರುಣ್ ಹೆಗ್ಡೆ, ಸುರೇಶ ಪೂಜಾರಿ ವರಂಗ, ರಕ್ಷಿತಾ ಪಿ.ಭಟ್, ಉದಯ ಸೇರಿಗಾರ್, ರಾಧಾಕೃಷ್ಣ ಕ್ರಮಧಾರಿ, ಸಂತೋಷ್ ಕುವಾರ್ ಶೆಟ್ಟಿ, ಸುಕುವಾರ್ ಮುನಿಯಾಲ್, ಹೆಬ್ರಿ ಜನಾರ್ದನ್, ಮಂಜುನಾಥ ಕೆ.ಶಿವಪುರ, ಸೋನಿ ಪಿ.ಶೆಟ್ಟಿ, ಡಾ.ಸುಷ್ಮಾ ಆರ್.ಹೆಗ್ಡೆ, ಡಾ.ಭಾರ್ಗವಿ ಆರ್.ಐತಾಳ್, ಕೆ.ಬಾಲಚಂದ್ರ ಹೆಬ್ಬಾರ್ ಮೊದಲಾದವರು ಇದ್ದರು.
ವೀಣಾ ಆರ್.ಭಟ್ ಸ್ವಾಗತಿಸಿದರು. ಪ್ರಶಾಂತ್ ಪೈ ವಂದಿಸಿದರು. ಕಬ್ಬಿನಾಲೆ ರಾಮಚಂದ್ರ ಭಟ್ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net