

ಬಿಲ್ಲವ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡ ಗುರುಪೂಜೆ ಮತ್ತು ವಿದ್ಯಾನಿಧಿ ಕಾರ್ಯಕ್ರಮ ಮಹತ್ವಪೂರ್ಣವಾಗಿದ್ದು, ಇದು ನಿರಂತರವಾಗಿ ಸಾಗಬೇಕು. ಪ್ರತಿ ವರ್ಷ ಸಂಘದ ವತಿಯಿಂದ ಉತ್ತಮ ಕಾರ್ಯಕ್ರಮಗಳು ಆಯೋಜನೆಯಾಗಬೇಕು ಹಾಗೂ ಅದಕ್ಕೆ ಸಮಾಜದವರ ಸಹಕಾರ ದೊರೆಯಬೇಕು ಎಂದು ಕೋಡಿ- ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೋಡಿ ಗಂಗಾಧರ ಪೂಜಾರಿ ಹೇಳಿದರು.