ಸ್ಮೋಕ್ ಹೌಸ್ ಬೆಂಕಿಗಾಹುತಿ

ರಬ್ಬರ್ ಒಣಗಿಸುವ ಸ್ಮೋಕ್ ಹೌಸ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
ರಬ್ಬರ್ ಒಣಗಿಸುವ ಸ್ಮೋಕ್ ಹೌಸ್ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿರುವುದು.
Published on
ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಪೊಸೊಳಿಕೆಯಲ್ಲಿ ಬುಧವಾರ ರಬ್ಬರ್ ಒಣಗಿಸುವ ಸ್ಮೋಕ್ ಹೌಸ್ ಕಟ್ಟಡಕ್ಕೆ ಬೆಂಕಿ ಬಿದ್ದು ನಷ್ಟ ಸಂಭವಿಸಿದೆ. ಪೊಸೊಳಿಕೆ ನಿವಾಸಿ ಪಿ.ಕೆ.ಜೋಬ್ ಎಂಬುವರಿಗೆ ಸೇರಿದ ಸ್ಮೋಕ್ ಹೌಸ್ ಬೆಂಕಿಗೆ ಆಹುತಿಯಾಗಿದೆ.
ಮನೆ ಸಮೀಪವೇ ಎರಡು ಸ್ಮೋಕ್ ಹೌಸ್‌ಗಳು ಇದ್ದು ಬೆಂಕಿ ಆಕಸ್ಮಿಕದಲ್ಲಿ ಎರಡೂ ಕಟ್ಟಡಗಳು ಸಂಪೂರ್ಣ ಹಾನಿಗೀಡಾಗಿವೆ. ಒಣಗಲು ಹಾಕಿದ್ದ ರಬ್ಬರ್, ಕಟ್ಟಡದೊಳಗಿದ್ದ ಮರಮಟ್ಟುಗಳು ಸಂಪೂರ್ಣ ಸುಟ್ಟು ಹೋಗಿದೆ. ಬೆಳಗ್ಗಿನ ಜಾವ ಬೆಂಕಿ ಕಾಣಿಸಿಕೊಂಡಿದ್ದು, ನಂದಿಸಲು ಯತ್ನಿಸಿದರೂ ಕಟ್ಟಡಗಳು ಬೆಂಕಿಗೆ ಆಹುತಿಯಾದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net