ಸಣ್ಣ ಬದಲಾವಣೆ ನಾಳಿನ ಯಶಸ್ಸಿಗೆ ತಳಹದಿ

 ಇರುವೈಲು ಶಾಲಾ ಶತಮಾನೋತ್ಸವ ಸಮಿತಿ ಸಭೆಯಲ್ಲಿ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಐ.ಚಂದ್ರಹಾಸ ಶೆಟ್ಟಿ, ದಿವಾಕರ ಪ್ರಭು ನಡುಬಾಳಿಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ ಮೊದಲಾದವರಿದ್ದರು.
ಇರುವೈಲು ಶಾಲಾ ಶತಮಾನೋತ್ಸವ ಸಮಿತಿ ಸಭೆಯಲ್ಲಿ ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಐ.ಚಂದ್ರಹಾಸ ಶೆಟ್ಟಿ, ದಿವಾಕರ ಪ್ರಭು ನಡುಬಾಳಿಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ ಮೊದಲಾದವರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಸಣ್ಣ ಸಣ್ಣ ಬದಲಾವಣೆಗಳೇ ನಾಳಿನ ದೊಡ್ಡ ಯಶಸ್ಸಿಗೆ ತಳಹದಿ. ಪಾಲಕರು, ಶಿಕ್ಷಕರು ಒಂದಾಗಿ ಶ್ರಮಿಸಿದರೆ ಗ್ರಾಮದ ಮಕ್ಕಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯ. ಈ ಶಾಲೆ ಜ್ಞಾನ ದೇಗುಲದಂತೆ ಪಾಠದೊಂದಿಗೆ ಸಂಸ್ಕಾರ ನೀಡುತ್ತಿದೆ ಎಂದು ಕರ್ನಾಟಕ ಸರ್ಕಾರದ ಅಡ್ವೋಕೇಟ್ ಜನರಲ್ ಇರುವೈಲು ತಾರಾನಾಥ ಪೂಜಾರಿ ಹೇಳಿದರು.
ದ.ಕ. ಜಿಪಂ ಹಿರಿಯ ಪ್ರಾಥಮಿಕ ಶಾಲೆ ಇರುವೈಲು ಶತಮಾನೋತ್ಸವ ಸಮಿತಿ ಸಭೆ, ಲೆಕ್ಕಪತ್ರ ಮಂಡನೆಯಲ್ಲಿ ಶತಮಾನೋತ್ಸವ ಸಮಿತಿ, ಶಿಕ್ಷಕರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕಾಗಿ ಶ್ರಮಿಸಿದ ಸಮಿತಿ ಅಧ್ಯಕ್ಷ, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮೋಹನ್ ಟಿ. ಅವರನ್ನು ಹಳೇ ವಿದ್ಯಾರ್ಥಿಗಳು, ಶಾಲಾ ವತಿಯಿಂದ ಸನ್ಮಾನಿಸಲಾಯಿತು. ಸಮಿತಿ ಕೋಶಾಧಿಕಾರಿ ಯತೀಶ್ ಕರ್ಕೇರ ಲೆಕ್ಕಪತ್ರ ಮಂಡಿಸಿ, ಶತಮಾನೋತ್ಸವ ಕಟ್ಟಡಕ್ಕೆ ಒಟ್ಟು 1.25 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ ಎಂದರು.

ಸಮಿತಿ ಗೌರವಾಧ್ಯಕ್ಷ ಐ.ಚಂದ್ರಹಾಸ ಶೆಟ್ಟಿ, ದಿವಾಕರ ಪ್ರಭು ನಡುಬಾಳಿಕೆ, ಎಸ್.ಡಿ.ಎಂ.ಸಿ ಅಧ್ಯಕ್ಷ ಸುನೀಲ್ ಕುಮಾರ್ ಕಟ್ಟಣಿಗೆ, ಮುಖ್ಯ ಶಿಕ್ಷಕ ಅನಂತ ಭಟ್, ಪಿ.ಎಂ.ಆಲಿ, ಸತೀಶ್ಚಂದ್ರ ಸಾಲ್ಯಾನ್ ಪಾಣಿಲ, ರಾಜೇಶ್ ಪೂಜಾರಿ ಕಾಳೂರು, ಮುತ್ತಪ್ಪ ಎಂ.ಸಾಲ್ಯಾನ್, ಕುಮಾರ್ ಪೂಜಾರಿ, ನವೀನ್ ಪೂಜಾರಿ ಕಿಟ್ಟುಬೆಟ್ಟು, ವಕೀಲೆ ಮಲ್ಲಿಕಾ ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ನವೀನ್ ಪೂಜಾರಿ ಕಿಟ್ಟುಬೆಟ್ಟು ಸ್ವಾಗತಿಸಿದರು. ಸತೀಶ್ ಪೂಜಾರಿ ತಂಗಿಲ ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net