ನಡಿಪಟ್ಣದಲ್ಲಿ ತೀವ್ರಗೊಂಡ ಕಡಲ್ಕೊರೆತ

 ಪಡುಬಿದ್ರಿ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಬ್ಲೂಫ್ಲಾೃಗ್ ಬೀಚ್ ಸಂಪರ್ಕಿಸುವ ಮೀನುಗಾರಿಕಾ ರಸ್ತೆಗೆ ಅಲೆಗಳು ಅಪ್ಪಳಿಸುತ್ತಿವೆ.
ಪಡುಬಿದ್ರಿ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಬ್ಲೂಫ್ಲಾೃಗ್ ಬೀಚ್ ಸಂಪರ್ಕಿಸುವ ಮೀನುಗಾರಿಕಾ ರಸ್ತೆಗೆ ಅಲೆಗಳು ಅಪ್ಪಳಿಸುತ್ತಿವೆ.
Published on

ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ

ಕಾಪು ತಾಲೂಕಿನಲ್ಲಿ ಗಾಳಿ ಮಳೆ ಜೋರಾಗಿದ್ದು, ಪಡುಬಿದ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಡಿಪಟ್ಣದಲ್ಲಿ ಶುಕ್ರವಾರ ಕಾಣಿಸಿಕೊಂಡಿರುವ ಕಡಲ್ಕೊರೆತ ಶನಿವಾರ ಮತ್ತಷ್ಟು ತೀವ್ರಗೊಂಡಿದೆ.

ಐನೂರು ಮೀಟರ್‌ನಷ್ಟು ಕೊರೆತ ವಿಸ್ತರಣೆಯಾಗಿದ್ದು, ಬ್ಲೂಫ್ಲಾೃಗ್ ಬೀಚ್ ಪ್ರದೇಶದಲ್ಲಿನ ನಿರ್ಮಾಣಗಳು ಅಪಾಯದಲ್ಲಿವೆ. ಮೀನುಗಾರಿಕಾ ರಸ್ತೆಯ ಕೇವಲ 2 ಮೀಟರ್ ಅಂತರದಲ್ಲಿ ಕಡಲ ಅಬ್ಬರದ ಅಲೆಗಳು ಅಪ್ಪಳಿಸುತ್ತಿದ್ದು, ಸಂಪರ್ಕ ಕಡಿತಗೊಳ್ಳುವ ಭೀತಿ ಎದುರಾಗಿದೆ. ಈ ಪ್ರದೇಶದಲ್ಲಿ ಹಲವಾರು ಗಾಳಿ ಮರಗಳು ಸಮುದ್ರ ಪಾಲಾಗಿವೆ.
ತೀರದಲ್ಲಿ ಅಬ್ಬರದ ಅಲೆಗಳು ಅಪ್ಪಳಿಸುತ್ತಿರುವುದರಿಂದ ಮೀನುಗಾರಿಕಾ ರಸ್ತೆಯಲ್ಲಿಯೇ ಕಡಲ ನೀರು ಹರಿಯುತ್ತಿದೆ. ಬ್ಲೂಫ್ಲಾೃಗ್ ಬೀಚ್ ಒಳ ಭಾಗದಲ್ಲಿ ಅಲೆಯೊಂದಿಗೆ ಬರುವ ಕಸಕಡ್ಡಿಗಳು ಸಂಗ್ರಹವಾಗುತ್ತಿದ್ದು, ಸಿಬ್ಬಂದಿ ಅದನ್ನು ಸ್ವಚ್ಛವಾಗಿಡುವ ಕಾರ್ಯ ನಡೆಸುತ್ತಿದ್ದಾರೆ. ಈ ಹಿಂದೆ ಇಲ್ಲಿ ಕಡಲ್ಕೊರೆತದಿಂದ ಹಲವಾರು ನಿರ್ಮಾಣ ಕಾಮಗಾರಿಗಳು ಸಮುದ್ರ ಪಾಲಾಗಿತ್ತು. ಇದೀಗ ಕೊರೆತ ಮತ್ತಷ್ಟು ತೀವ್ರಗೊಂಡು ಬೀಚ್‌ನ ಇನ್ನಷ್ಟು ನಿರ್ಮಾಣ ಕಾಮಗಾರಿಗಳು ಅಪಾಯಕ್ಕೆ ಸಿಲುಕಿವೆ. ಕಟಪಾಡಿ, ಕಾಪುವಿನಲ್ಲಿಯೂ ಕಡಲ ಅಬ್ಬರ ಜೋರಾಗಿದ್ದು, ಬೃಹತ್ ಅಲೆಗಳ ಅಬ್ಬರಕ್ಕೆ ನೀರು ಮೀನುಗಾರಿಕಾ ರಸ್ತೆಗಳಿಗೆ ಅಪ್ಪಳಿಸುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net