ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ನಡೆದ ಗಾಳಿಪಟ ರಚನೆ ಸ್ಪರ್ಧೆಯನ್ನು ಪ್ರಾಂಶುಪಾಲ ಡಾ. ಶುಭಕರ ಆಚಾರಿ ಉದ್ಘಾಟಿಸಿದರು. ಡಾ.ಕೆ.ಪ್ರೇವಾನಂದ, ನಾರಾಯಣ ಹೊಳ್ಳ, ವಾಣಿ ಎನ್.ಹೊಳ್ಳ ಮತ್ತಿತರರಿದ್ದರು.
ಕುಂದಾಪುರ: ಪಠ್ಯೇತರ ಚಟುವಟಿಕೆ ಪಠ್ಯಕ್ಕೆ ಪೂರಕ. ಮಕ್ಕಳನ್ನು ಕ್ರಿಯಾಶೀಲವಾಗಿ, ಕೌಶಲ ವೃದ್ಧಿ ವಾಡುತ್ತದೆ ಎಂದು ಭಂಡಾರ್ಕಾರ್ಸ್ ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಆಚಾರಿ ಹೇಳಿದರು.
ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಭಾನುವಾರ ದಿ.ರಾಮಚಂದ್ರ ಭಟ್ ಮತ್ತು ದಿ.ಅಹಲ್ಯಾ ಆರ್.ಭಟ್ ಅವರ ನೆನಪಿನಲ್ಲಿ ಟೀಂ ಪಾರಿಜಾತ ತಂಡದ ವತಿಯಿಂದ ತಾಲೂಕಿನ ಎಲ್ಲ ಶಾಲೆಗಳ 3 ರಿಂದ 6ನೇ ತರಗತಿವರೆಗಿನ ಮಕ್ಕಳಿಗಾಗಿ ನಡೆದ ಗಾಳಿಪಟ ರಚನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಕೆ.ಪ್ರೇಮಾನಂದ, ನಾರಾಯಣ ಹೊಳ್ಳ, ವಾಣಿ ಎನ್.ಹೊಳ್ಳ, ರವೀಂದ್ರನಾಥ ಹೊಳ್ಳ, ಸವಿತಾ ಹೊಳ್ಳ, ದಿನೇಶ ಕೆದ್ಲಾಯ, ಸಂಧ್ಯಾ ಕೆದ್ಲಾಯ, ಶ್ರೀಧರ ಕೆದ್ಲಾಯ, ಟೀಂ ಪಾರಿಜಾತದ ಅರ್ಪಣಾ ಜಿ.ಭಟ್, ಪ್ರೀತಿ ಗಣೇಶ್ ಭಟ್ ಉಪಸ್ಥಿತರಿದ್ದರು.