ಮಹಿಳೆ ಬೆಳೆಸಿಕೊಳ್ಳಲಿ ಧನಾತ್ಮಕ ಮನೋಭಾವ

ಆದಿಉಡುಪಿಯಲ್ಲಿ ಆಯೋಜಿಸಿದ್ದ ಕೌಶಾಲಾಭಿವೃದ್ಧಿ, ಮಾಹಿತಿ ಕಾರ್ಯಾಗಾರವನ್ನು ಅಬೀದ್​ ಗದ್ಯಾಳ್​ ಉದ್ಘಾಟಿಸಿದರು. ಡಾ. ಎಂ. ಬೊಮ್ಮಯ್ಯ, ಸುಂದರ್​ ಗುಜ್ಜರ್​ಬೆಟ್ಟು, ಶಂಕರ್​ ಮಲ್ಲಾರ್​, ಶ್ಯಾಮರಾಜ್​ ಬಿರ್ತಿ, ಮಂಜುನಾಥ್​ ಗಿಳಿಯಾರು, ಸುಂದರ್​ ಮಾಸ್ತರ್​, ವಸಂತಿ ಶಿವಾನಂದ್​, ಪ್ರಮೀಳಾ ಬಾರ್ಕೂರು ಇತರರಿದ್ದರು.
ಆದಿಉಡುಪಿಯಲ್ಲಿ ಆಯೋಜಿಸಿದ್ದ ಕೌಶಾಲಾಭಿವೃದ್ಧಿ, ಮಾಹಿತಿ ಕಾರ್ಯಾಗಾರವನ್ನು ಅಬೀದ್​ ಗದ್ಯಾಳ್​ ಉದ್ಘಾಟಿಸಿದರು. ಡಾ. ಎಂ. ಬೊಮ್ಮಯ್ಯ, ಸುಂದರ್​ ಗುಜ್ಜರ್​ಬೆಟ್ಟು, ಶಂಕರ್​ ಮಲ್ಲಾರ್​, ಶ್ಯಾಮರಾಜ್​ ಬಿರ್ತಿ, ಮಂಜುನಾಥ್​ ಗಿಳಿಯಾರು, ಸುಂದರ್​ ಮಾಸ್ತರ್​, ವಸಂತಿ ಶಿವಾನಂದ್​, ಪ್ರಮೀಳಾ ಬಾರ್ಕೂರು ಇತರರಿದ್ದರು.
Published on

* ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಸಲಹೆ

* ಆದಿಉಡುಪಿಯಲ್ಲಿ ಕೌಶಾಲಾಭಿವೃದ್ಧಿ, ಮಾಹಿತಿ ಕಾರ್ಯಾಗಾರ

ಉಡುಪಿ: ಜಗದಾದ್ಯಂತ ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಋಣಾತ್ಮಕ ಭಾವದಿಂದ ಏನನ್ನೂ ಸಾಧಿಸಲು ಆಗದು. ಧನಾತ್ಮಕ ಮನೋಭಾವ ಬೆಳೆಸಿಕೊಂಡರೆ ಗುರಿ ಸಾಧನೆ ಸುಲಭವಾಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಅಬೀದ್​ ಗದ್ಯಾಳ್​ ಸಲಹೆ ನೀಡಿದರು.
ಆದಿಉಡುಪಿಯ ಡಾ.ಅಂಬೇಡ್ಕರ್​ ಭವನದಲ್ಲಿ ಕರ್ನಾಟಕ ದಲಿತ ಸಂರ್ಷ ಸಮಿತಿ ಅಂಬೇಡ್ಕರ್​ ವಾದ ಜಿಲ್ಲಾ ಸಮಿತಿ, ಉಡುಪಿ ಜಿಲ್ಲಾ ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ವತಿಯಿಂದ ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಹಿಳೆಯರಿಗಾಗಿ ಸೋಮವಾರ (ಆ.24) ಆಯೋಜಿಸಿದ್ದ ಕೌಶಲಾಭಿವೃದ್ಧಿ ಮತ್ತು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಸ್ವಾವಲಂಬಿಗಳಾಗಿ

ಬ್ರಹ್ಮಾವರ ರುಡ್​ಸೆಟ್​ ಕೇಂದ್ರದ ಮುಖ್ಯ ಪ್ರಬಂಧಕ ಡಾ. ಎಂ. ಬೊಮ್ಮಯ್ಯ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಬೇಕು. ಆ ನಿಟ್ಟಿನಲ್ಲಿಯೇ ಡಾ.ಅಂಬೇಡ್ಕರ್​ ಅವರು ಮಹಿಳೆಯರಿಗೂ ಸಂವಿಧಾನದಲ್ಲಿ ಹಕ್ಕು ಕಲ್ಪಿಸಿದರು. ದೇಶದ ಎಲ್ಲ ಜಾತಿ, ಧರ್ಮದ ಮಹಿಳೆಯರಿಗೆ ಅವರ ಸಂವಿಧಾನ ಮಾರ್ಗಸೂಚಿಯಾಗಿದೆ ಎಂದರು.
ಸ್ವಉದ್ಯೋಗದ ಕುರಿತು ಪ್ರಮೀಳಾ ಬಾರ್ಕೂರು ಅವರು ಸಾಬೂನು ತಯಾರಿಸುವ ಕುರಿತು ಪ್ರಾತಕ್ಷಿಕೆ ನೀಡಿದರು. ಸುಂದರ್​ ಗುಜ್ಜರ್​ಬೆಟ್ಟು ಮಾತನಾಡಿದರು. 
ಮೈಸೂರು ವಿಭಾಗೀಯ ಸಂಘಟನಾ ಸಂಚಾಲಕ ಶ್ಯಾಮರಾಜ್​ ಬಿರ್ತಿ ಸ್ವಾಗತಿಸಿದರು. ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್​ ಗಿಳಿಯಾರು ಪ್ರ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯ ಸಂಘಟನಾ ಸಂಚಾಲಕ ಸುಂದರ್​ ಮಾಸ್ತರ್​ ಸಂಘಟನೆಯ ಮಹತ್ವ ವಿವರಿಸಿದರು. ರಾಜ್ಯ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ್​ ವಂದಿಸಿದರು.

ಸಭೆಯಲ್ಲಿ ಸಾಲ ಯೋಜನೆಗೆ ಗದ್ದಲ

ಅಂಬೇಡ್ಕರ್​ ಅಭಿವೃದ್ಧಿ ನಿಗಮದ ಅಧಿಕಾರಿ ಶಂಕರ್​ ಮಲ್ಲಾರ್​ ಮಾತನಾಡಿ ಹಲವು ಯೋಜನೆಗಳ ಬಗ್ಗೆ ವಿವರಿಸಿ, ಉಡುಪಿ ಜಿಲ್ಲೆಗೆ ಕೇವಲ 79 ಲಕ್ಷ ರೂ.ಗಳ ಯೋಜನೆ ಬಂದಿದೆ. ಅದನ್ನು ಹೇಗೆ ಹಂಚಿಕೆ ಮಾಡುವುದೆಂದು ತಿಳಿಯುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಇದಕ್ಕೆ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್​ ಗಿಳಿಯಾರು ಪ್ರತಿಕ್ರಿಯಿಸಿ, ನಮ್ಮವರು ಎಷ್ಟೇ ಸಲ ಅರ್ಜಿ ಹಾಕಿದರೂ ಸಾಲ ಸಿಗುತ್ತಿಲ್ಲ. ಒಮ್ಮೆ ಇಲಾಖಾ ಕಚೇರಿಯವರು ತಿರಸ್ಕರಿಸಿದರೆ ಮತ್ತೊಮ್ಮೆ ಬ್ಯಾಂಕ್​ನವರು ತಿರಸ್ಕರಿಸುತ್ತಾರೆ ಎಂದು ಆಕ್ರೋ ವ್ಯಕ್ತಪಡಿಸಿದರು. ಇದಕ್ಕೆ ದನಿಗೂಡಿಸಿದ ದಲಿತ ಮಹಿಳೆಯರು, ನೀವು ಕೇವಲ ಶಾಸಕರು, ಜನಪ್ರತಿನಿಧಿಗಳ ಚೇಲಾಗಳಿಗೆ ಮಾತ್ರ ಸಾಲ ನೀಡುತ್ತೀರಿ. ಈ ಹಿಂದೆ ಕೊಟ್ಟವರಿಗೇ ಮತ್ತೆ ಮತ್ತೆ ಸಾಲ ಕೊಡುತ್ತೀರಿ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಇದರಿಂದ ಕೆಲ ಸಮಯ ಸಭೆಯಲ್ಲಿ ಗದ್ದಲ ಉಂಟಾಯಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net