ವಿವಿಧ ಕೋರ್ಸ್‌ಗಳ ತಾಂತ್ರಿಕ ಸಲಹೆಗಾರ ಬಾಲಕೃಷ್ಣ ಮಾತನಾಡಿ, ಇಂದಿನ ಕ್ಷೇತ್ರದ ಅಗತ್ಯಗಳನ್ನು ಮನಗಂಡು, ಕೈಗಾರಿಕಾ ಕೌಶಲಯುತ ಮಾನವ ಸಂಪನ್ಮೂಲವನ್ನು ರೂಪಿಸುವುದು ನಮ್ಮ ಪ್ರಮುಖ ಗುರಿ. ಕೈಗಾರಿಕಾ ತರಬೇತಿ ಜತೆಗೆ ಸೃಜನಾತ್ಮಕ ವೃತ್ತಿ ಜೀವನಕ್ಕೆ ಅವಕಾಶ, ಕೃತಕ ಬುದ್ಧಿಮತ್ತೆ ಮತ್ತು ಆಟೋಮೇಶನ್ ಯುಗಕ್ಕೆ ಕೌಶಲಾಧಾರಿತ ತರಬೇತಿ ಹಾಗೂ ತಾಂತ್ರಿಕ ಕೋರ್ಸ್‌ಗಳಾದ ಇಲೆಕ್ಟ್ರಿಕಲ್ ಇಲೆಕ್ಟ್ರಾನಿಕ್ಸ್, ಫಿಟ್ಟಿಂಗ್- ವೆಲ್ಡಿಂಗ್, ಮೆಕ್ಯಾನಿಕ್- ರೆಫ್ರಿಜರೇಶನ್, ಏರ್ ಕಂಡೀಷನಿಂಗ್ ಹಾಗೂ ಪ್ಲಂಬಿಂಗ್, ಫ್ಯಾಶನ್ ಡಿಸೈನ್ ಕೋರ್ಸ್ ಮತ್ತು ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್ ತರಬೇತಿ ನೀಡಲಾಗುವುದು ಎಂದರು.