ಎಸ್​ಕೆಡಿಆರ್​ಡಿಪಿ ತ್ರೈಮಾಸಿಕ ಪ್ರಥಮ ಸಭೆ

ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದ ಎಸ್​ಕೆಡಿಆರ್​ಡಿಪಿ ಸಭೆಯನ್ನು ಸತ್ಯಾನಂದ ನಾಯಕ್​ ಉದ್ಘಾಟಿಸಿದರು. ಸುರೇಂದ್ರ ನಾಯ್ಕ್​, ಗಣೇಶ್​ ಆಚಾರ್ಯ, ರಾಜು ಪೂಜಾರಿ ಉಪ್ಪೂರು, ಬಾಲಚಂದ್ರ, ಶಿವಕುಮಾರ್​ ಅಂಬಲಪಾಡಿ ಇತರರಿದ್ದರು.
ಉಡುಪಿಯ ಬ್ರಹ್ಮಗಿರಿಯಲ್ಲಿ ನಡೆದ ಎಸ್​ಕೆಡಿಆರ್​ಡಿಪಿ ಸಭೆಯನ್ನು ಸತ್ಯಾನಂದ ನಾಯಕ್​ ಉದ್ಘಾಟಿಸಿದರು. ಸುರೇಂದ್ರ ನಾಯ್ಕ್​, ಗಣೇಶ್​ ಆಚಾರ್ಯ, ರಾಜು ಪೂಜಾರಿ ಉಪ್ಪೂರು, ಬಾಲಚಂದ್ರ, ಶಿವಕುಮಾರ್​ ಅಂಬಲಪಾಡಿ ಇತರರಿದ್ದರು.
Published on

* ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷರಾಗಿ ರಾಜು ಪೂಜಾರಿ ಆಯ್ಕೆ

ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್​ (ರಿ.) ಉಡುಪಿ ತಾಲೂಕು ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್​ (ರಿ.) ಉಡುಪಿ ತಾಲೂಕು ಇದರ 2026-27ನೇ ಸಾಲಿನ ತ್ರೈಮಾಸಿಕ ಪ್ರಥಮ ಸಭೆಯು ಬ್ರಹ್ಮಗಿರಿಯ ಪ್ರಗತಿಸೌಧದ ಸಭಾಭವನದಲ್ಲಿ ಗುರುವಾರ (ಮೇ 28) ನಡೆಯಿತು.
ಕಾರ್ಯಕ್ರಮವನ್ನು ಸತ್ಯಾನಂದ ನಾಯಕ್​ ಉದ್ಘಾಟಿಸಿದರು. ಹಿಂದಿನ ಸಭೆಯ ವರದಿಯನ್ನು ತಾಲೂಕು ವೇದಿಕೆಯ ಕಾರ್ಯದರ್ಶಿ, ಯೋಜನಾಧಿಕಾರಿ ಸುರೇಂದ್ರ ನಾಯ್ಕ್​ ವಾಚಿಸಿದರು. ಎಲ್ಲ ವಲಯದ ಮೇಲ್ವಿಚಾರಕರು 2025-26ನೇ ಸಾಲಿನ ಜನಜಾಗೃತಿ ಕಾರ್ಯಕ್ರಮಗಳ ಸಾಧನಾ ವರದಿ ಮಂಡಿಸಿದರು. 
ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್​ ಆಚಾರ್ಯ ಪ್ರಸಕ್ತ ಸಾಲಿನ ಕ್ರಿಯಾಯೋಜನೆಯ ಅನುಷ್ಠಾನದ ಕುರಿತು, ತಾಲೂಕು ವೇದಿಕೆಯ ಸಭೆಯ ಬಗ್ಗೆ ಮಾಹಿತಿ ನೀಡಿ ವಲಯವಾರು ವಿಂಗಡಣೆ ಮಾಡಿದರು.
ತಾಲೂಕು ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದ ರಾಜು ಪೂಜಾರಿ ಉಪ್ಪೂರು ಅವರನ್ನು ಸನ್ಮಾನಿಸಸಲಾಯಿತು. ಉಪ್ಪೂರಿನಿಂದ ಸುನೀಲ್​ ಶೆಟ್ಟಿ, ಮಣಿಪಾಲದಿಂದ ವಸಂತ ಶೆಟ್ಟಿ, ಪೆರ್ಡೂರುನಿಂದ ಸತೀಶ್​ ಶೆಟ್ಟಿ, ಅಂಬಾಗಿಲಿನಿಂದ ಮಹಾಬಲ ಶೆಟ್ಟಿ, ಅಂಬಲಪಾಡಿಯಿಂದ ಮಹೇಶ್​ ಕುಮಾರ್​, ಮಲ್ಪೆಯಿಂದ ಉದಯಕುಮಾರ್​ ಶೆಟ್ಟಿ, ಹಿರಿಯಡ್ಕದಿಂದ ನಳಿನಾ ಅವರು ವಲಯ್ಯಾಧ್ಯಕ್ಷರಾಗಿ ಆಯ್ಕೆಯಾದರು. ಶಿವಕುಮಾರ್​ ಅಂಬಲಪಾಡಿ ಇತರರು ಉಪಸ್ಥಿತರಿದ್ದರು.
ಪ್ರತಿಭಾ ಹಾಗೂ ಚಂದ್ರಾವತಿ ಪ್ರಾರ್ಥಿಸಿದರು. ಮೇಲ್ವಿಚಾರಕ ಬಾಲಚಂದ್ರ ಸ್ವಾಗತಿಸಿದರು. ಪ್ರೇಮಾ ವಂದಿಸಿದರು. ಯೋಜನಾಧಿಕಾರಿ ಗಣೇಶ್​ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net