ರಾಷ್ಟ್ರೀಯ ಹೆದ್ದಾರಿ 66ರ ಪಣಂಬೂರು, ಬೈಕಂಪಾಡಿ ಮತ್ತು ಕಾವೂರು-ಕೂಳೂರು ರಸ್ತೆಯಲ್ಲಿ 75ಕ್ಕೂ ಅಧಿಕ ಬಿಡಾಡಿ ಜಾನುವಾರುಗಳು ರಸ್ತೆಯಲ್ಲೇ ಸಂಚರಿಸುತ್ತಿರುವುದು ವಾಹನ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಈಗಾಗಲೇ ಹಲವಾರು ಅಪಘಾತಗಳು ನಡೆದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಬಿಡಾಡಿ ಜಾನುವಾರುಗಳು ದಿಢೀೀರ್ ಆಗಿ ಹೆದ್ದಾರಿ ದಾಟುವುದು, ಕಾದಾಡಿಕೊಂಡು ಹೆದ್ದಾರಿ ನಡುವೆ ನಿಲ್ಲುವುದು, ಹೆದ್ದಾರಿಯಲ್ಲೇ ಗುಂಪಾಗಿ ಮಲಗುವುದು ಮತ್ತಿತರ ಸಮಸ್ಯೆಗಳಿಂದ ಹಲವಾರು ಅಪಘಾತಗಳು ಉಂಟಾಗಿದ್ದು ವಾಹನ ಸವಾರರು ಗಾಯಗೊಂಡಿದ್ದರೆ, ಬೀಡಾಡಿ ದನಗಳು ಕೂಡ ಗಾಯಗೊಂಡು ಸಾವನ್ನಪ್ಪಿದ ಹಲವು ಘಟನೆಗಳು ನಡೆದಿದೆ. ಹೆದ್ದಾರಿ ಸಂಚಾರದಲ್ಲಿ ಸುರಕ್ಷತೆಗಾಗಿ ಡಿವೈಡರ್ ಮೇಲೆ ರಕ್ಷಣಾ ತಡಬೇಲಿ ನಿರ್ಮಿಸಬೇಕು ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.