

ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ನೀರಿನಿಂದಾವೃತವಾಗಿರುವ ತಗ್ಗು ಪ್ರದೇಶದಿಂದ ಜನರನ್ನು ಸುರಕ್ಷಿ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 6 ಶಿಬಿರಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ ಮೂರು ವೆಳ್ಳರಿಕುಂಡು ತಾಲೂಕಿನಲ್ಲಿ ಮತ್ತು ಮೂರು ಹೊಸದುರ್ಗ ತಾಲೂಕಿನಲ್ಲಿ ಕಾರ್ಯಾಚರಿಸುತ್ತಿವೆ. ಈ ಶಿಬಿರಗಳಲ್ಲಿ ಒಟ್ಟು 88 ಕುಟುಂಬಗಳ 208 ಮಂದಿ ಆಶ್ರಯ ಪಡೆದಿದ್ದು, ಇವರಲ್ಲಿ 85 ಪುರುಷರು, 93 ಮಹಿಳೆಯರು ಮತ್ತು 34 ಮಕ್ಕಳಿದ್ದಾರೆ. ಪಲವಯಲ್, ಕಿನಾನೂರ್-ಕರಿಂದಲಂ, ಪೆರೋಲ್ ಮತ್ತು ಕ್ಲೈಕೋಡ್ ಗ್ರಾಮಗಳಲ್ಲಿ ಈ ಶಿಬಿರಗಳನ್ನು ತೆರೆಯಲಾಗಿದೆ.