ತಾಲೂಕಿನ ಉಚ್ಚಿಲ ಬಡಾ- 227, ಬೆಳಪು- 171, ಬೆಳ್ಳೆ- 363, ಹೆಜವಾಡಿ- 225, ಇನ್ನಂಜೆ- 62, ಕಟಪಾಡಿ- 113, ಕೋಟೆ- 148, ಕರ್ಕಾಲು- 170, ಕುತ್ಯಾರು- 97, ಮಜೂರು- 240, ಮುದರಂಗಡಿ- 173, ಪಡುಬಿದ್ರಿ- 663, ಪಲಿವಾರು- 337, ಶಿರ್ವ- 264, ಎರ್ವಾಳು ತೆಂಕ- 218, ಎಲ್ಲೂರು- 247 ಸೇರಿ 3718 ಕುಟುಂಬಗಳಿಂದ ನಿವೇಶನಕ್ಕಾಗಿ ಅರ್ಜಿ ಸಲ್ಲಿಕೆಯಾಗಿದೆ. ಅದರಲ್ಲೂ ಸರ್ಕಾರಿ ಜಮೀನೇ ಇಲ್ಲದ ಪಡುಬಿದ್ರಿಯಲ್ಲಿ ಅತೀ ಹೆಚ್ಚು ಅಂದರೆ 663 ಅರ್ಜಿಗಳ ಸಲ್ಲಿಕೆಯಾಗಿರುವುದು ಗಮನಾರ್ಹವಾಗಿದೆ.