

ಉಡುಪಿ: ರಾಜ್ಯದಲ್ಲಿ ಅತಿಹೆಚ್ಚು ಮನೆ ಸಾಲ ನೀಡುವುದರಲ್ಲಿ ಬೆಂಗಳೂರು, ಮಂಗಳೂರಿನ ಬಳಿಕ ಉಡುಪಿ 3ನೇ ಸ್ಥಾನದಲ್ಲಿದೆ. ಭಾರಿ ಪ್ರಮಾಣದಲ್ಲಿ ಅಭಿವೃದ್ಧಿ ಕಾಣುತ್ತಿರುವ ಉಡುಪಿಯಲ್ಲಿ ಶತಮಾನಗಳ ಸೇವಾನುಭ ಹೊಂದಿರುವ ಹಿರಿಯ ಸಹಕಾರಿ ಶಿರಸಿ ಅರ್ಬನ್ ಬ್ಯಾಂಕ್ನ ಶಾಖೆ ಆರಂಭಗೊಂಡಿರುವುದು ಅರ್ಥಪೂರ್ಣ. ಎರಡೂವರೆ ಸಾವಿರ ಕೋಟಿ ರೂ. ಆರ್ಥಿಕ ವ್ಯವಹಾರ ನಡೆಸುತ್ತಿರುವ ಈ ಬ್ಯಾಂಕ್ ಗ್ರಾಹಕರ ಪ್ರೀತಿ, ವಿಶ್ವಾಸ ಗಳಿಸಿದೆ. ಸಂಜೆ 6ರ ವರೆಗೂ ಬ್ಯಾಂಕಿಂಗ್ ಸೇವೆ ನೀಡುತ್ತಿದ್ದು ಮಾದರಿಯಾಗಿದೆ ಎಂದು ಎಸ್ವಿಸಿ ಕೋ-&ಆಪರೇಟಿವ್ ಬ್ಯಾಂಕ್ ಮುಂಬೈನ ನಿರ್ದೇಶಕ ಸತೀಶ್ ತೋನ್ಸೆ ರಾವ್ ಶ್ಲಾಘಿಸಿದರು.
ಉಡುಪಿ-ಮಣಿಪಾಲ ಹೆದ್ದಾರಿಯ ಕುಂಜಿಬೆಟ್ಟುವಿನಲ್ಲಿರುವ ಆಪಲ್ ಶೋರೂಮ್ ಇಮ್ಯಾಜಿನ್ ಸಮೀಪದ ಮಿರಾಜ್ ಕಟ್ಟಡದ ಗ್ರೌಂಡ್ ಫ್ಲೋರ್ನಲ್ಲಿ ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ಕಳೆದ 121 ವರ್ಷದಿಂದ ಉತ್ತಮ ಬ್ಯಾಂಕಿಂಗ್ ಸೇವೆಯ ಮೂಲಕ ನಾಡಿನ ಗಮನ ಸೆಳೆದಿರುವ ಉತ್ತರ ಕನ್ನಡ ಜಿಲ್ಲೆ ಶಿರಸಿಯ 'ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಲಿ.'ನ 24ನೇ ಶಾಖೆಯನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
ಉತ್ತಮ ಬ್ಯಾಂಕಿಂಗ್ ಸೇವೆ
ಮಣಿಪಾಲದ ಡಾ. ಟಿಎಂಎ ಪೈ ಫೌಂಡೇಷನ್ನ ಕೋಶಾಧಿಕಾರಿ ಟಿ.ಸಚಿನ್ ಪೈ ಮಾತನಾಡಿ, ಗ್ರಾಮೀಣ ಭಾಗದ ಆರ್ಥಿಕ ಅಭಿವೃದ್ಧಿಯಲ್ಲಿ ಶಿರಸಿ ಅರ್ಬನ್ ಬ್ಯಾಂಕ್ನ ಕೊಡುಗೆ ಮಹತ್ತರವಾಗಿದೆ. ಸ್ಥಳಿಯರ ಆಶೋತ್ತರಗಳಿಗೆ, ಅವರ ಬದುಕಿಗೆ ಆಸರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಉಡುಪಿ ಜನರಿಗೂ ಸಹ ಉತ್ತಮ ಬ್ಯಾಂಕೊಂದರ ಸೇವೆ ಲಭಿಸುತ್ತಿರುವುದು ಸಂತಸ ವಿಚಾರ ಎಂದರು.
ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ಶಿರಸಿ ಅಧ್ಯಕ್ಷ ಜಯದೇವ್ ಯು. ನೀಲೇಕಣಿ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕ್ನ ಉಪಾಧ್ಯಕ್ಷ ಸಂತೋಷ್ ಪಂಡಿತ್, ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ನಿತಿನ್ ಕಾಸರಕೋಡು, ನಿರ್ದೇಶಕರಾದ ವರೀಂದ್ರ ಕಾಮತ್, ಟಿ.ಎಸ್. ಬಾಲಮಣಿ, ಬ್ಯಾಂಕ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರತಿ ಎಸ್. ಶೆಟ್ಟರ್, ಬ್ಯಾಂಕ್ನ ಡಿಜಿಎಂ ರಾಘವೇಂದ್ರ ಪೈ, ಉಡುಪಿ ಶಾಖೆಯ ವ್ಯವಸ್ಥಾಪಕ ಗಜಾನನ ಶೆಟ್ಟಿ, ಬ್ಯಾಂಕ್ನ ಸಿಬ್ಬಂದಿ ಪಾಲ್ಗೊಂಡಿದ್ದರು.
ಬ್ಯಾಂಕ್ನ ಒಳಾಂಗಣ ವಿನ್ಯಾಸ ಮಾಡಿದ ಗುತ್ತಿಗೆದಾರ ಪ್ರದೀಪ್ ಶೆಟ್ಟಿ, ಕಟ್ಟಡದ ಮಾಲೀಕರು ಹಾಗೂ ಎಂಐಟಿಯ ಸಹಾಯಕ ಪ್ರಾಧ್ಯಾಪಕಿ ಡಾ. ಗಂಗೋತ್ರಿ ಸಾನಿಲ್ ಅವರನ್ನು ಸನ್ಮಾನಿಸಲಾಯಿತು.
ಹಿರಿಯ ಸಂಗೀತ ಗುರು ವಿದುಷಿ ಡಾ. ಉಷಾ ಹೆಬ್ಬಾರ್ ಗಣಪತಿ ಸ್ತುತಿ ಪ್ರಾರ್ಥಿಸಿದರು. ಬ್ಯಾಂಕ್ನ ನಿರ್ದೇಶಕ ಪ್ರೊ. ಕೆ.ಎನ್. ಹೊಸಮನಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಬ್ಯಾಂಕ್ನ ನಿರ್ದೇಶಕ ಸದಾನಂದ್ ನಾಯ್ಕ್ ವಂದಿಸಿದರು.
ರಾಜ್ಯದ 10 ಗಣ್ಯಮಾನ್ಯ ಸಹಕಾರಿ ಬ್ಯಾಂಕ್ಗಳಲ್ಲಿ ಒಂದಾದ ಶಿರಸಿ ಅರ್ಬನ್ ಬ್ಯಾಂಕ್ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಶಾಖೆ ತೆರೆಯುತ್ತಿರುವುದು ನಿಜಕ್ಕೂ ಸಾಧನೆಯ ಮೆಟ್ಟಿಲಾಗಿದೆ. ಶ್ರೀಕೃಷ್ಣನ ತಾಣ ಉಡುಪಿಯಲ್ಲಿ ಶಾಖೆ ಆರಂಭಗೊಂಡಿದ್ದು, ಇಲ್ಲಿಯೂ ಉತ್ತಮ ಸೇವೆ ನೀಡಲಿದ್ದೇವೆ. ಸೆ.23ರಂದು ಶಿವಮೊಗ್ಗ ಜಿಲ್ಲೆ ಸಾಗರದಲ್ಲಿ 25ನೇ ಶಾಖೆ ಆರಂಭಗೊಳ್ಳಲಿದೆ.
ಜಯದೇವ್ ಯು. ನೀಲೇಕಣಿ. ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ನ ಅಧ್ಯಕ್ಷ.