ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಉಡುಪಿಯಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪ್ರೊ. ಫಣಿರಾಜ್ ಮಾತನಾಡಿದರು. ನಿಹಾಲ್ ಕಿದಿಯೂರು, ಡಾ.ನಸುಹಾ, ಆಯಾನ್ ಮಲ್ಪೆ, ರೆಹಾನ್ ಉಡುಪಿ, ಸಾಕೀಬ್ ಹೂಡೆ, ನಿಫಾಲ್ ಕಿದಿಯೂರು ಇತರರಿದ್ದರು.
Published on:
Copied
Follow Us
* ಚಿಂತಕ ಪ್ರೊ. ಫಣಿರಾಜ್ ಆಕ್ರೋಶ
* ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಪ್ರತಿಭಟನೆ
ಉಡುಪಿ: ನೀಟ್ ವ್ಯವಸ್ಥೆಯ ಮೂಲಕ ಭಾರತದಲ್ಲಿ ವೈದ್ಯಕೀಯ ಶಿಕ್ಷಣವನ್ನು ವ್ಯಾಪಾರವನ್ನಾಗಿ ಮಾಡಿದ್ದು, ನೈತಿಕ ಮತ್ತು ಸಮಾಜಿಕ ಬದ್ಧತೆ ನಾಶ ಮಾಡಲಾಗುತ್ತಿದೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯು ವಿದ್ಯಾರ್ಥಿಗಳ ಕನಸುಗಳ ಮೇಲಿನ ದಾಳಿಯಾಗಿದೆ. ಇದಕ್ಕೆ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನೇರ ಹೊಣೆಯಾಗಿದ್ದು, ಕೇಂದ್ರ ಮಾನವ ಸಂಪನ್ಮೂಲ ಸಚಿವ ರಾಜೀನಾಮೆ ಕೊಡಬೇಕು ಎಂದು ಚಿಂತಕ ಪ್ರೊ.ಫಣಿರಾಜ್ ಅಭಿಪ್ರಾಯಪಟ್ಟರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಉಡುಪಿ ನಗರದ ಜಟ್ಕಾ ಸ್ಟ್ಯಾಂಡ್ ಬಳಿ ಎಸ್ಐಒ ಮತ್ತು ಜಿಐಒ ಉಡುಪಿ ಜಿಲ್ಲೆ ಸೋಮವಾರ (ಮೇ 25) ಸಂಜೆ ಜಂಟಿಯಾಗಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.
ಎಸ್ಐಒ ರಾಷ್ಟ್ರೀಯ ಮಾಜಿ ಕಾರ್ಯದರ್ಶಿ ನಿಹಾಲ್ ಕಿದಿಯೂರು, ಡಾ.ನಸುಹಾ, ಎಸ್ಐಒ ಜಿಲ್ಲಾಧ್ಯಕ್ಷ ಆಯಾನ್ ಮಲ್ಪೆ ಮಾತನಾಡಿದರು.
ಎಸ್ಐಒ ಇದರ ರೆಹಾನ್ ಉಡುಪಿ, ಸಾಕೀಬ್ ಹೂಡೆ, ನಿಫಾಲ್ ಕಿದಿಯೂರು, ಮುಝೈನ್ ಆದಿ ಉಡುಪಿ, ಹಂಝಾ ಹಸನ್ ಹೂಡೆ, ಹುಸೇನ್ ಕೋಡಿಬೆಂಗ್ರೆ, ನಿಸಾರ್ ಉಡುಪಿ, ಜಿಐಒ ಇದರ ಝೀಫಾ ನಾಝ್,ಅಸ್ಮಾ ಬಾನು ಇತರರು ಉಪಸ್ಥಿತರಿದ್ದರು. ಸಮೀರ್ ತೀರ್ಥಹಳ್ಳಿ ನಿರೂಪಿಸಿದರು.
ವಾಸ್ತವಿಕವಾಗಿ ನೀಟ್ ಪರೀಕ್ಷೆಯು ಕೇಂದ್ರೀಕೃತವಾಗಿದ್ದು ಸರ್ವಾಧಿಕಾರಿ ವ್ಯವಸ್ಥೆಯ ಭಾಗವಾಗಿದೆ. ಅದನ್ನು ದಕ್ಷಿಣದ ರಾಜ್ಯಗಳು ವಿರೋಧಿಸುತ್ತ ಬಂದಿದೆ. ಉತ್ತರದ ರಾಜ್ಯಗಳ ಕೋಚಿಂಗ್ ಮಾಫಿಯಾಗಳಿಗೆ ಮಣಿದು ನೀಟ್ ಪರೀಕ್ಷೆ ನಡೆಸಲಾಗುತ್ತಿದೆ. ಕೋಚಿಂಗ್ ಸೆಂಟರ್ ಮಾಫಿಯಾಕ್ಕೂ, ಈ ಹಗರಣಕ್ಕೂ ನೇರ ಸಂಬಂಧವಿದೆ. ಈ ಪರೀಕ್ಷಾ ವ್ಯವಸ್ಥೆಯನ್ನು ವಿಕೇಂದ್ರೀಕೃತ ಮಾಡಬೇಕು.