ಕರಾವಳಿಯ ಆರ್ಥಿಕತೆಗೆ ಮೀನುಗಾರಿಕೆ ಕೊಡುಗೆ ದೊಡ್ಡದು

ಉಡುಪಿಯ ಮಲ್ಪೆ ಬೀಚ್​ನಲ್ಲಿ ಮೀನುಗಾರರಿಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವಕ್ಕೆ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ನಾಗರಾಜ್​ ಸುವರ್ಣ, ಸವಿತಾ ಖಾದ್ರಿ, ಪ್ರಭಾಕರ್​ ಪೂಜಾರಿ, ಪ್ರಕಾಶ್​ ಜಿ., ಸತೀಶ್​ ಬಂಗೇರ, ಜಗನ್ನಾಥ ಕಡೆಕಾರ್​, ನವೀನ್​ ಕೋಟ್ಯಾನ್​, ಕೃಷ್ಣ ಎಸ್​. ಸುವರ್ಣ ಇತರರಿದ್ದರು.
ಉಡುಪಿಯ ಮಲ್ಪೆ ಬೀಚ್​ನಲ್ಲಿ ಮೀನುಗಾರರಿಗೆ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವಕ್ಕೆ ಯಶ್​ಪಾಲ್​ ಸುವರ್ಣ ಚಾಲನೆ ನೀಡಿದರು. ನಾಗರಾಜ್​ ಸುವರ್ಣ, ಸವಿತಾ ಖಾದ್ರಿ, ಪ್ರಭಾಕರ್​ ಪೂಜಾರಿ, ಪ್ರಕಾಶ್​ ಜಿ., ಸತೀಶ್​ ಬಂಗೇರ, ಜಗನ್ನಾಥ ಕಡೆಕಾರ್​, ನವೀನ್​ ಕೋಟ್ಯಾನ್​, ಕೃಷ್ಣ ಎಸ್​. ಸುವರ್ಣ ಇತರರಿದ್ದರು.
Published on

* ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘನೆ

* ಪರ್ಸೀನ್​ ಮೀನುಗಾರರ ಸಂಘದ ರಜತ ಸಂಭ್ರಮ

*  ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ 

ಉಡುಪಿ: ಆರೋಗ್ಯ, ಶಿಕ್ಷಣ ಹಾಗೂ ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಉಡುಪಿ  ಮುಂಚೂಣಿಯಲ್ಲಿದೆ. ಅಲ್ಲದೆ, ಮಲ್ಪೆಯಲ್ಲಿರುವ ಮೀನುಗಾರಿಕಾ ಬಂದರು ಏಷಿಯಾದಲ್ಲಿಯೇ ಅತಿದೊಡ್ಡ ಬಂದರು ಎಂಬ ಹೆಗ್ಗಳಿಕೆಯಿದೆ. ಇಲ್ಲಿನ ಪರ್ಸೀನ್​ ಸೇರಿದಂತೆ ಎಲ್ಲ ಬಗೆಯ ಮೀನುಗಾರಿಕೆಯು ರಾಜ್ಯದ ಕರಾವಳಿಯ ಆರ್ಥಿಕತೆಗೆ ಬಹಳ ದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘಿಸಿದರು.
ಮಲ್ಪೆಯ ಪರ್ಸೀನ್​ ಮೀನುಗಾರರ ಸಂಘದ ರಜತ ಸಂಭ್ರಮದ ನಿಮಿತ್ತ ಮಲ್ಪೆ ಬೀಚ್​ನಲ್ಲಿ ಆಯೋಜಿಸಿದ್ದ ಗ್ರಾಮೀಣ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪರ್ಸೀನ್​ ಮೀನುಗಾರರ ಸಂಘದ ಅಧ್ಯಕ್ಷ ನಾಗರಾಜ್​ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಆನಂದ ಸುವರ್ಣ, ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಸವಿತಾ ಖಾದ್ರಿ, ಉಡುಪಿ ನಗಸರಭಾ ಮಾಜಿ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷ ಪ್ರಕಾಶ್​ ಜಿ., ಹನುಮಾನ-ವಿಠೋಭ ಭಜನಾ ಮಂದಿರದ ಅಧ್ಯಕ್ಷ ಸತೀಶ್​ ಬಂಗೇರ, ಮಲ್ಪೆ ಮೀನುಗಾರ ಸಂಘದ ಕಾರ್ಯದರ್ಶಿ ಜಗನ್ನಾಥ ಕಡೆಕಾರ್​, ಹೆಜಮಾಡಿ ರಂಪಣಿ ಮೀನುಗಾರರ ಸಂಘದ ಅಧ್ಯಕ್ಷ ಹರಿಶ್ಚಂದ್ರ, ಟೆಂಪೋ ಚಾಲಕ ಮತ್ತು ಮಾಲಕರ ಸಂಘದ ಅಧ್ಯಕ್ಷ ಗಣೇಶ್​ ಕುಂದರ್​, ರಜತ ಮಹೋತ್ಸವ ಸಮಿತಿಯ ಕಾರ್ಯದರ್ಶಿ ನವೀನ್​ ಕೋಟ್ಯಾನ್​, ಸಹಕಾರ್ಯದರ್ಶಿ ಜಯಶೀಲ ಅಮೀನ್​, ಕೋಶಾಧಿಕಾರಿ ರಾಜೇಶ್​ ಮೈಂದನ್​, ಸಂಘಟನಾ ಕಾರ್ಯದರ್ಶಿ ದೇವದಾಸ್​ ಪುತ್ರನ್​, ರಮೇಶ್​ ಮೆಂಡನ್​, ಸಂತೋಷ್​ ಸಾಲ್ಯಾನ್​, ಸಹಕೋಶಾಧಿಕಾರಿ ಪದ್ಮನಾಭ ಕುಂದರ್​ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಎಸ್​. ಸುವರ್ಣ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ವಂದಿಸಿದರು. ಬೆಳಗ್ಗೆಯಿಂದ ಸಂಜೆಯವರೆಗೆ ವಿವಿಧ ಆಟೋಟ ಸ್ಪರ್ಧೆ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಿಮಿತ್ತ ಸಂಘದ ಕಾರ್ಯಾಲಯದಲ್ಲಿ ಗಣಹೋಮ ನಡೆಯಿತು.
"

ಕರಾವಳಿ ಭಾಗದ ಯುವ ಜನತೆ ಮಲ್ಪೆ ಬಂದರನ್ನೇ ಹೆಚ್ಚು ಅವಲಂಬಿಸಿದ್ದಾರೆ. ಇಲ್ಲಿ 100ಕ್ಕೂ ಅಧಿಕ ಪರ್ಸೀನ್​ ಬೋಟ್​ಗಳಿದ್ದು, ಅದನ್ನು ಅವಲಂಬಿಸಿ 10ರಿಂದ 12 ಸಾವಿರ ಜನರು ತೊಡಗಿಕೊಂಡು ಬದುಕು ಕಟ್ಟಿಕೊಂಡಿರುವುದು ಉಡುಪಿಗೆ ದೊಡ್ಡ ಕೊಡುಗೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net