ಬಲಿಪ ಕುಟುಂಬದಿಂದ ಯಕ್ಷಗಾನಕ್ಕೆ ಮಹತ್ವದ ಕೊಡುಗೆ

ಮಾರೂರು ಗುಡ್ಡಲಂಗಡಿಯಲ್ಲಿ ಆಯೋಜಿಸಿದ್ದ ಪಂಚಾಶತ್ ಸಮ್ಮಾನ್ ಕಾರ್ಯಕ್ರಮದಲ್ಲಿ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಸನ್ಮಾನಿಸಲಾಯಿತು. ಶಾಂತಾರಾಮ ಕುಡ್ವ, ಕೃಷ್ಣಕುಮಾರ್, ಎಂ.ದಯಾನಂದ ಪೈ ಮತ್ತಿತರರು ಉಪಸ್ಥಿತರಿದ್ದರು.
ಮಾರೂರು ಗುಡ್ಡಲಂಗಡಿಯಲ್ಲಿ ಆಯೋಜಿಸಿದ್ದ ಪಂಚಾಶತ್ ಸಮ್ಮಾನ್ ಕಾರ್ಯಕ್ರಮದಲ್ಲಿ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಸನ್ಮಾನಿಸಲಾಯಿತು. ಶಾಂತಾರಾಮ ಕುಡ್ವ, ಕೃಷ್ಣಕುಮಾರ್, ಎಂ.ದಯಾನಂದ ಪೈ ಮತ್ತಿತರರು ಉಪಸ್ಥಿತರಿದ್ದರು.
Published on
ಮೂಡುಬಿದಿರೆ: ಪ್ರಸಾದ್ ಬಲಿಪರು ಬಲಿಪ ಪರಂಪರೆಯ ನಾಲ್ಕನೇ ತಲೆಮಾರಿನ ಕೊಂಡಿಯಾಗಿದ್ದು, ಬಲಿಪ ನಾರಾಯಣ ಭಾಗವತರು ಸೇರಿದಂತೆ ಅವರ ಕುಟುಂಬದ ಕಲಾಸೇವೆ ಯಕ್ಷಗಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ ಎಂದು ಯಕ್ಷಗಾನ ಸಂಘಟಕ ಶಾಂತಾರಾಮ ಕುಡ್ವ ಹೇಳಿದರು.
ಬಲಿಪ ಪ್ರಸಾದ್ ಭಾಗವತರ 50ರ ನೆನಪಿನ ಅಂಗವಾಗಿ ಆಯೋಜಿಸಿರುವ ಪಂಚಾಶತ್ ಸ್ಮರಣೆ ‘ಪಂಚಾಶತ್ ಸಮ್ಮಾನ್’ ಸರಣಿಯ 12ನೇ ಸನ್ಮಾನ ಕಾರ್ಯಕ್ರಮದಲ್ಲಿ ವಾಸ್ತುತಜ್ಞ, ಯಕ್ಷಗಾನ ಸಂಘಟಕ ರಾಘವೇಂದ್ರ ಭಂಡಾರ್ಕಾರ್ ಅವರನ್ನು ಮಾರೂರು ಗುಡ್ಡಲಂಗಡಿಯಲ್ಲಿ ಬುಧವಾರ ಸನ್ಮಾನಿಸಿ ಸಂಸ್ಮರಣಾ ಭಾಷಣಗೈದರು.
ಪತ್ರಕರ್ತ ಕೃಷ್ಣಕುಮಾರ್ ಪ್ರಸ್ತಾವನೆಗೈದರು. ಪ್ರಮುಖರಾದ ಎಂ. ದಯಾನಂದ ಪೈ, ಮೊಹಮ್ಮದ್ ಅಸ್ಲಮ್, ಕರುಣಾಕರ ದೇವಾಡಿಗ, ಮುರಳೀಧರ ಕೋಟ್ಯಾನ್, ಅಭಿನಂದನ್ ಬಲ್ಲಾಳ್, ರಾಬರ್ಟ್ ಫ್ರಾಂಕ್ಲಿನ್ ರೇಗೋ, ಜೋಯಲ್ ಡಿಸೋಜ, ವಿದೇಶ್ ಎಂ., ಗಣೇಶ್ ನಾಯಕ್ ಬಾರ್ದಿಲ, ಶಿವಪ್ರಸಾದ್ ಹೆಗ್ಡೆ, ಸುಶಾಂತ ಕರ್ಕೇರ, ಶಂಕರ ಆಚಾರ್ಯ, ಸರಸ್ವತಿ ಸದಾಶಿವ ಆಚಾರ್ಯ, ಸದಾಶಿವ ಆಚಾರ್ಯ, ಸಂಜೀವ ಆಚಾರ್ಯ, ಕುಮಾರ್ ಪೂಜಾರಿ, ಪ್ರಶಾಂತ್ ಕೆ.ಭಂಡಾರಿ, ಸಿ.ಎಚ್.ಗಫೂರ್ ಮತ್ತಿತರರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net