ದೇಶವಾಸಿಗರೆಲ್ಲರಿಗೆ ಮಿತವ್ಯಯಕ್ಕೆ ಕರೆಕೊಟ್ಟ ಪ್ರಧಾನಿ ನರೇಂದ್ರ ಮೋದಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಪೂಜಾರಿ, ಮಾಜಿ ಪ್ರಧಾನಿಗಳಾದ ನೆಹರು, ಶಾಸ್ತ್ರಿ, ಇಂದಿರಾ ಕಾಲದಿಂದಲೂ ದೇಶಕ್ಕಾಗಿ ಅನೇಕ ನಿರ್ಧಾರ ಕೈಗೊಳ್ಳಲಾಗಿದೆ. ಒಂದು ಹೊತ್ತಿನ ಊಟ ಬಿಡುವಂತೆಯೂ, ಚಿನ್ನ ಖರೀದಿ ಮಾಡದಂತೆಯೂ ಕರೆ ನೀಡಿದ್ದಾರೆ. ಮಧ್ಯಪ್ರಾಚ್ಯ ರಾಷ್ಟ್ರಗಳ ಯುದ್ಧದಿಂದಾಗಿ ಭಾರತಕ್ಕೂ ಬಿಸಿ ತಟ್ಟಿದೆ. ವಿದೇಶದಿಂದ ಚಿನ್ನ ಆಮದು ಮಾಡಬೇಕಿದ್ದರಿಂದ ಪ್ರಧಾನಿ ಮೋದಿ ಅವರು ಚಿನ್ನ ಖರೀದಿಸಬೇಡಿ ಎಂದಿದ್ದಾರೆ. ಮದುವೆ ಆಗುವವರು ಚಿನ್ನ ಖರೀದಿಸಬೇಡಿ ಎಂದಿಲ್ಲ. ಅವರ ಹೇಳಿಕೆಯಿಂದ ಚಿನ್ನದ ಅಂಗಡಿ ಮಾಲೀಕರಿಗೆ, ಕೆಲಸಗಾರರಿಗೆ ತೊಂದರೆ ಆಗದು. ದೇಶದ ಹಿತದೃಷ್ಟಿಯಿಂದ ಕೈಗೊಂಡ ನಿಸ್ವಾರ್ಥ ನಿರ್ಧಾರವದು. ವಿಪಕ್ಷಗಳು ಸರ್ಕಾರದ ಆಶಯ ಅರ್ಥ ಮಾಡಿಕೊಳ್ಳಬೇಕು. ಮೋದಿ ತಮ್ಮ ಬೆಂಗಾವಲು ಪಡೆಯಲ್ಲಿ ಶೇ.50 ಕಡಿತ ಮಾಡಿದ್ದಾರೆ. ರಾಜ್ಯದ ವಿಪಕ್ಷ ನಾಯಕರು ಅದನ್ನು ಅನುಸರಿಸಿದ್ದಾರೆ. ಕಾಂಗ್ರೆಸ್ನವರೂ ಸಹ ದೇಶದ ಹಿತಾಸಕ್ತಿಗಾಗಿ ಪ್ರಧಾನಿ ಕರೆಗೆ ಸ್ಪಂದಿಸಬೇಕು ಎಂದರು.