ಸದ್ದಿಲ್ಲದೆ ದೂರ ಸಾಗಿದ ಸಿದ್ದಕಟ್ಟೆಯ 108 ಆಂಬುಲೆನ್ಸ್

108 ಆಂಬುಲೆನ್ಸ್ ವಾಹನ
108 ಆಂಬುಲೆನ್ಸ್ ವಾಹನ
Published on
ಬಂಟ್ವಾಳ: ತಾಲೂಕಿನ ಸಿದ್ದಕಟ್ಟೆ ಹಾಗೂ ಫರಂಗೀಪೇಟೆಗೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಒದಗಿಸಲಾಗಿದ್ದ 108 ಆಂಬುಲೆನ್ಸ್ ವಾಹನದ ಪೈಕಿ ಸಿದ್ದಕಟ್ಟೆಯ 108 ಆಂಬುಲೆನ್ಸ್ ಸದ್ದಿಲ್ಲದೆ ಮಾಯವಾಗಿದೆ.
ಸಿದ್ದಕಟ್ಟೆ ಸುತ್ತಮುತ್ತಲಿನ ಹತ್ತರಿಂದ ಹನ್ನೆರಡು ಗ್ರಾಮಗಳ ಗ್ರಾಮೀಣ ಭಾಗದ ಜನರಿಗೆ ಆಕಸ್ಮಿಕ ಹಾಗೂ ಇನ್ನಿತರ ತುರ್ತು ಆರೋಗ್ಯದ ಸೇವೆಗಾಗಿ ದೂರದ ಆಸ್ಪತ್ರೆಗೆ ಸಾಗಿಸಲು ಆಂಬುಲೆನ್ಸ್ ಅನುಕೂಲವಾಗುತ್ತಿತ್ತು. ಆದರೆ ಇತ್ತೀಚಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಕಾರಣ ನೀಡದೆ ಸಿದ್ದಕಟ್ಟೆಯಿಂದ ಬೇರೊಂದು ಕಡೆಗೆ ಈ ವಾಹನವನ್ನು ವರ್ಗಾಯಿಸಿದ್ದಾರೆ.
ಸಿದ್ದಕಟ್ಟೆಯ ಜನರಿಗೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಇಲ್ಲದಂತಾಗಿದ್ದು, ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ವಿಚಾರಿಸಿದರೆ ಸಮರ್ಪಕ ಉತ್ತರ ನೀಡುತ್ತಿಲ್ಲ ಎಂದು ದೂರಲಾಗಿದೆ. 108 ಆಂಬುಲೆನ್ಸ್ ವಾಹನ ನೌಕರರಲ್ಲಿ ವಿಚಾರಿಸಿದರೆ ಸಿಬ್ಬಂದಿ ಕೊರತೆ ಸಮಸ್ಯೆ ಎನ್ನುತ್ತಾರೆ. ಕೆಲವು ಸಂದರ್ಭದಲ್ಲಿ ತುರ್ತು ಸೇವೆಗೆ ವಾಹನ ಲಭ್ಯವಿಲ್ಲದೆ ಸಾವು ಸಂಭವಿಸಿದ ಪ್ರಕರಣವೂ ನಡೆದಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಹನ್ನೆರಡು ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆಗೆ ಒದಗಿಸಲಾದ 108 ಆಂಬುಲೆನ್ಸ್ ವಾಹನವನ್ನು ಬೇರೆ ಕಡೆಗೆ ಕಳುಹಿಸಿರುವ ಕಾರಣ ಈ ಭಾಗದ ಜನರು ಸಮಸ್ಯೆ ಎದುರಿಸುವಂತಾಗಿದೆ. 108 ಆಂಬುಲೆನ್ಸ್ ಸೇವೆ ಮುಂದುವರಿಸಲು ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಪತ್ರ ಬರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net