ಮೆಹಂದಿ, ಹಳದಿ, ಗೋಧೂಳಿ ಲಗ್ನ ಸಹಿತ ಶುಭ ಸಮಾರಂಭಗಳಿಗೆ, ನೈಟ್ ಪಾರ್ಟಿಗೆ ಅನುಕೂಲವಾಗುವಂತೆ 'ಶ್ಯಾಮಿಲಿ ಗ್ರೀನ್ಸ್ ಓಪನ್ ಗಾರ್ಡನ್ ಸಭಾಂಗಣ'ವೂ ಇಲ್ಲಿದೆ. ವಿಶಾಲವಾದ ಊಟದ ಹಾಲ್, ವೆಜ್ ಮತ್ತು ನಾನ್ವೆಜ್ಗೆ ಪ್ರತ್ಯೇಕ ಅಡುಗೆ ಕೋಣೆ ವ್ಯವಸ್ಥೆ ಒಳಗೊಂಡಿದೆ. ಗ್ರಾಹಕರು ಇಚ್ಛಿಸುವ ಮಾದರಿಯಲ್ಲಿ ಓಪನ್ ಸಭಾಂಗಣವಿದೆ. ಅಷ್ಟೇ ಅಲ್ಲದೆ, 30 ಎಸಿ ಡಿಲೆಕ್ಸ್ ರೂಮ್, 2 ಪ್ರತ್ಯೇಕ ವಿಲ್ಲಾ ಒಳಗೊಂಡಿದೆ. ದೂರದ ಊರಿನಿಂದ ಆಗಮಿಸಿ ಇಲ್ಲೇ ಉಳಿದುಕೊಂಡು ಮದುವೆ, ಸಮಾರಂಭ ಮುಗಿಸಿ ತೆರಳುವುದಕ್ಕೂ ಇಲ್ಲಿ ವ್ಯವಸ್ಥೆ ಇದೆ. 300ಕ್ಕೂ ಅಧಿಕ ಕಾರ್ ಪಾರ್ಕ್ ಮಾಡಲು ವಿಶಾಲ ಪ್ರದೇಶವಿದೆ. ಸ್ವಿಮ್ಮಿಂಗ್ ಫೂಲ್, ರಿಕ್ರಿಯೇಶನ್ ಕ್ಲಬ್, ಜಿಮ್, ಮಕ್ಕಳ ಆಟದ ಮೈದಾನವೂ ಇದೆ.