ಕಾರಂತರ ಕಾದಂಬರಿ ಪಾತ್ರ ನೈಜ ಜೀವನಕ್ಕೆ ಹತ್ತಿರ:

ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಡಾ. ಶಿವರಾಮ ಕಾರಂತರ ಬದುಕು-ಬರಹ ವಿಚಾರ ಸಂಕಿರಣ  ಉದ್ಘಾಟಿಸಿದರು.
ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಡಾ. ಶಿವರಾಮ ಕಾರಂತರ ಬದುಕು-ಬರಹ ವಿಚಾರ ಸಂಕಿರಣ ಉದ್ಘಾಟಿಸಿದರು.
Published on
ಉಡುಪಿ: ಪಾಶ್ಚಾತ್ಯರ ಪ್ರಭಾವಕ್ಕೆ ಒಳಗಾದ ಕಾದಂಬರಿಕಾರರ ರೀತಿಯಲ್ಲಿ ವ್ಯವಸ್ಥೆ ವಿರುದ್ಧ ಹತಾಶೆ, ಪ್ರತಿಭಟನೆ, ಸಿನಿಕತನ, ಆದರ್ಶವಾದ ಯಾವುದೂ ಇಲ್ಲದೆ ಡಾ. ಶಿವರಾಮ ಕಾರಂತರ ಕಾದಂಬರಿ ಪಾತ್ರಗಳು ನೈಜ ಜೀವನಕ್ಕೆ ಹತ್ತಿರವಾಗಿವೆ. ಬದುಕಿನ ವಾಸ್ತವದ ಅರಿವು ಸಮರ್ಥವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಹಾವೇರಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ. 

ಎಂಜಿಎಂ ಕಾಲೇಜಿನಲ್ಲಿ ಮಂಗಳವಾರ ಮಂಗಳೂರು ವಿಶ್ವವಿದ್ಯಾಲಯ ಡಾ. ಶಿವರಾಮ ಕಾರಂತ ಪೀಠ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯ ಡಾ. ಶಿವರಾಮ ಕಾರಂತ ಟ್ರಸ್ಟ್​ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತರ ಬದುಕು-ಬರಹ ವಿಚಾರ ಸಂಕಿರಣ  ಉದ್ಘಾಟಿಸಿ, ಮಾತನಾಡಿದರು.

20ನೇ ಶತಮಾನದ ಜನಜೀವನ ಅರ್ಥ ಮಾಡಿಕೊಳ್ಳಲು ಕಾರಂತರ ಕಾದಂಬರಿಗಳನ್ನು ಓದಬೇಕು. ಭಾರತದಲ್ಲಿ ನಡೆಯುತ್ತಿದ್ದ ಸಾಮಾಜಿಕ ಪಲ್ಲಟಗಳನ್ನು ಗುರುತಿಸಿದ್ದಾರೆ. ಕಾರಂತರು ತಮ್ಮ 95 ವರ್ಷದ ಜೀವನದಲ್ಲಿ 1 ಲಕ್ಷ ಪುಟಗಳಷ್ಟು ಸಾಹಿತ್ಯ ಬರೆದಿದ್ದಾರೆ. 400 ಕೃತಿಗಳನ್ನು ರಚಿಸಿದ್ದಾರೆ. ಕರಾವಳಿ, ಮಲೆನಾಡು ಭಾಗದಲ್ಲಿ ನಿರಂತರ ಕ್ಷೇತ್ರಕಾರ್ಯದ ಮೂಲಕ ಮಾಹಿತಿ ಸಂಗ್ರಹಿಸಿ ವಾಸ್ತವವಾದ ನೆಲೆಗಟ್ಟಿನಲ್ಲಿ ಕಾದಂಬರಿಗಳನ್ನು ಬರೆದಿದ್ದಾರೆ ಎಂದರು.  

 ಡಾ. ಶಿವರಾಮ ಕಾರಂತ ಟ್ರಸ್ಟ್​ ಅಧ್ಯಕ್ಷ  ಡಾ. ಗಣನಾಥ ಎಕ್ಕಾರು ಆಶಯ ನುಡಿಗಳನ್ನಾಡಿದರು. ಡಾ. ಕೆ. ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ನಾಗಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಸಹ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ,  ಕಾರಂತ ಟ್ರಸ್ಟ್​ ಸದಸ್ಯರಾದ ಚೇತನ್​, ಶರ್​ೀ ಹೂಡೆ, ಸತೀಶ್​ ಕೊಡವೂರು ಉಪಸ್ಥಿತರಿದ್ದರು.  ಹಿರಿಯ ಸಂಶೋಧಕಿ ಡಾ. ರೇಖಾ ಬನ್ನಾಡಿ ಅವರು ಕಾರಂತರ ಬದುಕು ಮತ್ತು ಬರಹದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಂಸತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. 
ಸಭಾ ಕಾರ್ಯಕ್ರಮದ ನಂತರ ನಾನು ಕಾರಂತ ಎಂಬ ನಾಟಕ ಪ್ರದರ್ಶನಗೊಂಡಿತು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net