ಮುಸ್ಲಿಂ ಹೊರೆಕಾಣಿಕೆಗೆ ಪರ್ಯಾಯ ಸ್ವಾಗತ ಸಮಿತಿ ನೀಡಿಲ್ಲ ಅನುಮತಿ

ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.
ಯಶ್​ಪಾಲ್​ ಸುವರ್ಣ. ಉಡುಪಿ ಶಾಸಕ.
Published on

* ಅನಗತ್ಯ ಗೊಂದಲ ಸೃಷ್ಟಿಸಿದಂತೆ ಶಾಸಕ ಯಶ್​ಪಾಲ್​ ಎಚ್ಚರಿಕೆ

ಉಡುಪಿ: ಶಿರೂರು ಪರ್ಯಾಯ ಮಹೋತ್ಸವಕ್ಕೆ ಉಡುಪಿ ಜಿಲ್ಲಾ ಮುಸ್ಲಿಂ ಸೌಹಾರ್ದ ಸಮಿತಿಯಿಂದ ಹೊರೆಕಾಣಿಕೆ ನೀಡುತ್ತಿರುವ ಕುರಿತು ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಶಿರೂರು ಪರ್ಯಾಯ ಸ್ವಾಗತ ಸಮಿತಿ ಯಾವುದೇ ಅನುಮತಿ ನೀಡಿಲ್ಲ ಎಂದು ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಉಡುಪಿ ಶಾಸಕ ಯಶ್​ ಪಾಲ್​ ಸುವರ್ಣ ತಿಳಿಸಿದ್ದಾರೆ. 
ಪರ್ಯಾಯ ಮಹೋತ್ಸವದ ಹೊರೆಕಾಣಿಕೆ ಸಮಿತಿಗೆ ಮುಸ್ಲಿಂ ಸೌಹಾರ್ದ ಸಮಿತಿಯವರು ಈವರೆಗೂ ಹೊರೆಕಾಣಿಕೆ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮಠದ ವತಿಯಿಂದಲೂ ಮುಸ್ಲಿಂ ಸೌಹಾರ್ದ ಸಮಿತಿಗೆ ಯಾವುದೇ ಹೊರೆಕಾಣಿಕೆ ನೀಡುವಂತೆ ಮನವಿಯನ್ನೂ ಮಾಡಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊರೆಕಾಣಿಕೆ ಸಮಿತಿಗೆ ಈ ಬಗ್ಗೆ ಮಾಹಿತಿ ನೀಡದೆ ಮುಸ್ಲಿಂ ಸೌಹಾರ್ದ ಸಮಿತಿ ಗೊಂದಲ ಸೃಷ್ಟಿಸಲು ಮುಂದಾಗಿದೆ. ಅತ್ಯಂತ ಧಾರ್ಮಿಕ ಶ್ರದ್ಧಾ ಭಕ್ತಿಯ ಮೂಲಕ ಶ್ರೀಕೃಷ್ಣ ದೇವರಿಗೆ ಸಮರ್ಪಿಸುವ ಹೊರೆಕಾಣಿಕೆ ವಿಚಾರದಲ್ಲಿ ಸಮಿತಿಯ ನಿರ್ಧಾರವೇ ಅಂತಿಮವಾಗಿದೆ. ಮುಸ್ಲಿಂ ಸೌಹಾರ್ದ ಸಮಿತಿ ನೀಡಿರುವ ಹೊರೆಕಾಣಿಕೆ ಸಮರ್ಪಣೆಯ ಸುದ್ದಿಗೋಷ್ಠಿಗೂ ಶಿರೂರು ಪರ್ಯಾಯ ಸ್ವಾಗತ ಸಮಿತಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದ್ದಾರೆ.
ಮುಸ್ಲಿಂ ಸೌಹಾರ್ದ ಸಮಿತಿ ಮೂಲಕ ಪರ್ಯಾಯ ಹೊರೆಕಾಣಿಕೆ ಸಮರ್ಪಣೆ, ನೀರಿನ ಬಾಟಲ್​ ವಿತರಣೆ ಬಗ್ಗೆ ತಿಳಿಸಿದ್ದಾರೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ದಫ್​ ನಡೆಸುವ ಮೂಲಕ ಹಿಂದುಗಳ ಧಾರ್ಮಿಕ ಭಾವನೆ ಕೆರಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪರ್ಯಾಯ ಸ್ವಾಗತ ಸಮಿತಿಯ ಅನುಮತಿ ಪಡೆಯದೆ ಮುಸ್ಲಿಂ ಸೌಹಾರ್ದ ಸಮಿತಿ ಏಕಪಕ್ಷೀಯವಾಗಿ ಇಂತಹ ಸೂಕ್ಷ್ಮ ವಿಚಾರಗಳನ್ನು ಪರ್ಯಾಯ ಸಂದರ್ಭದಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಯಶ್​ಪಾಲ್​, ಎಚ್ಚರಿಕೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net