

ಬೆಳ್ತಂಗಡಿ: ಕಸ್ತೂರಿ ರಂಗನ್ ವರದಿ ಕುರಿತ ವಿಶೇಷ ಗ್ರಾಮಸಭೆಗೆ ಗೈರುಹಾಜರಾಗಿ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ಶಿರ್ಲಾಲು ಪಿಡಿಒ ಸುಶೀಲಾ ಅವರನ್ನು ಅಮಾನತುಗೊಳಿಸಿ ದ.ಕ. ಜಿಪಂ ಸಿಇಒ ಆದೇಶ ಹೊರಡಿಸಿದ್ದಾರೆ.
ಸೆ.25ರಂದು ವಿಶೇಷ ಗ್ರಾಮಸಭೆ ನಿಗದಿಪಡಿಸಲಾಗಿತ್ತು. ಆದರೆ ಪಿಡಿಒ ಸಭೆಯನ್ನು ಸೆ.21ಕ್ಕೆ ನಿಗದಿಪಡಿಸಿ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರು. ಆದರೆ ಸಭೆಗೆ ಜನರು ಬಂದರೂ ಪಿಡಿಒ ಗೈರುಹಾಜರಾಗಿದ್ದರು.
ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಘಟನೆ ಬಗ್ಗೆ ಪರಿಶೀಲನೆ ನಡೆಸಿದ ಬೆಳ್ತಂಗಡಿ ತಾಪಂ ಇಒ ಜಿಪಂ ಸಿಇಒಗೆ ವರದಿ ನೀಡಿದ್ದು, ಈ ಹಿನ್ನೆಲೆಯಲ್ಲಿ ಅಮಾನತು ಆದೇಶ ಹೊರಡಿಸಲಾಗಿದೆ.