ಬಿಎಸ್​ಪಿ ಜಿಲ್ಲಾಧ್ಯಕ್ಷರಾಗಿ ಶೇಖರ್​ ಹೆಜಮಾಡಿ ನೇಮಕ

ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ  ಮಂಜುನಾಥ್​ ವಿ. ಮಾತನಾಡಿದರು. ಶೇಖರ್​ ಹೆಜಮಾಡಿ, ಗೋಪಾಲಕೃಷ್ಣ ಕುಂದಾಪುರ, ಆನಂದ್​ ಬ್ರಹ್ಮಾವರ, ಪ್ರಶಾಂತ್​ ತೊಟ್ಟಂ, ಪುಷ್ಪಾಕರ್​ ಕೊರಂಗ್ರಪಾಡಿ, ವಿಠ್ಠಲ ಸಾಲಿಕೇರಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್​ ಕೋಟ್ಯಾನ್​ ಉಪಸ್ಥಿತರಿದ್ದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಜುನಾಥ್​ ವಿ. ಮಾತನಾಡಿದರು. ಶೇಖರ್​ ಹೆಜಮಾಡಿ, ಗೋಪಾಲಕೃಷ್ಣ ಕುಂದಾಪುರ, ಆನಂದ್​ ಬ್ರಹ್ಮಾವರ, ಪ್ರಶಾಂತ್​ ತೊಟ್ಟಂ, ಪುಷ್ಪಾಕರ್​ ಕೊರಂಗ್ರಪಾಡಿ, ವಿಠ್ಠಲ ಸಾಲಿಕೇರಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್​ ಕೋಟ್ಯಾನ್​ ಉಪಸ್ಥಿತರಿದ್ದರು.
Published on

* ಪಕ್ಷದ ಜಿಲ್ಲಾ ಉಸ್ತುವಾರಿ ಮಂಜುನಾಥ್​ ವಿ. ಮಾಹಿತಿ

* ಗ್ರಾಮದಿಂದ ಜಿಲ್ಲಾ ಮಟ್ಟದ ವರೆಗೆ ಪಕ್ಷ ಸಂಘಟನೆ

ಉಡುಪಿ: ಬಹುಜನ ಸಮಾಜ ಪಾರ್ಟಿ (ಬಿಎಸ್​ಪಿ)ಯ ಉಡುಪಿ ಜಿಲ್ಲಾ ಸಮಿತಿಯನ್ನು ಪುನ@ ರಚಿಸಲಾಗಿದ್ದು, ಗ್ರಾಮದಿಂದ ಜಿಲ್ಲಾ ಮಟ್ಟದ ವರೆಗೆ ಸಂಘಟನೆ ಬಲಪಡಿಸಲಾಗುವುದು. ತನ್ನಿಮಿತ್ತ ವಿವಿಧ ಹುದ್ದೆಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಉಡುಪಿ ಜಿಲ್ಲಾಧ್ಯಕ್ಷರಾಗಿ ಕರಾವಳಿಯ ಚಿರಪರಿಚಿತ ಹೋರಾಟಗಾರ ಶೇಖರ್​ ಹೆಜಮಾಡಿ ನೇಮಕಗೊಂಡಿದ್ದಾರೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ಮಂಜುನಾಥ್​ ವಿ. ಮಾಹಿತಿ ನೀಡಿದರು.
ಉಡುಪಿಯ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ (ಜೂ.20) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಪಾಧ್ಯಕ್ಷರಾಗಿ ಗೋಪಾಲಕೃಷ್ಣ ಕುಂದಾಪುರ, ಆನಂದ್​ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ಪ್ರಶಾಂತ್​ ತೊಟ್ಟಂ, ಖಜಾಂಚಿಯಾಗಿ ಪುಷ್ಪಾಕರ್​ ಕೊರಂಗ್ರಪಾಡಿ ಹಾಗೂ ಜಿಲ್ಲಾ ಕಚೇರಿಯ ಕಾರ್ಯದರ್ಶಿಯಾಗಿ ವಿಠ್ಠಲ ಸಾಲಿಕೇರಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕರ್ತರು ಸಜ್ಜು

ಜಿಲ್ಲಾಧ್ಯಕ್ಷ ಶೇಖರ್​ ಹೆಜಮಾಡಿ ಮಾತನಾಡಿ, ಮುಂಬರುವ ಗ್ರಾಪಂ, ತಾಪಂ ಚುನಾವಣೆ ಗಮನದಲ್ಲಿಟ್ಟುಕೊಂಡು ಈಗಾಗಲೇ ಕಾರ್ಯಕರ್ತರನ್ನು ಸಜ್ಜುಗೊಳಿಸಲಾಗುತ್ತಿದೆ. ರಾಜ್ಯ&ಕೇಂದ್ರ ಸರ್ಕಾರಗಳ ಜನವಿರೋಧಿ ನೀತಿ ವಿರುದ್ಧ ಹೋರಾಟ ನಡೆಸಲು, ಬಹುಜನ ಸಮುದಾಯದ ಧ್ವನಿಯನ್ನು ಸ್ಥಳೀಯ ಆಡಳಿತ ವ್ಯವಸ್ಥೆಯಲ್ಲಿ ಬಲಪಡಿಸಲು ಪಕ್ಷವು ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಲಿದೆ ಎಂದರು.

ಸಾಮಾಜಿಕ ನ್ಯಾಯಕ್ಕಾಗಿ ಪಕ್ಷದ ಹೋರಾಟ

ದಿನನಿತ್ಯದ ಅಗತ್ಯ ವಸ್ತುಗಳು, ಅಡುಗೆ ಅನಿಲ, ಪೆಟ್ರೋಲ್​-ಡೀಸೆಲ್​ ಹಾಗೂ ಎಲ್ಲ ಆಹಾರ ಪದಾರ್ಥಗಳ ಬೆಲೆ ದಿನೇದಿನೆ ಏರಿಕೆ ಆಗುತ್ತಿದೆ. ಇದರಿಂದ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರು ಇನ್ನಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಆದರೂ ಕೇಂದ್ರ&ರಾಜ್ಯ ಸರ್ಕಾರಗಳು ಬೆಲೆ ನಿಯಂತ್ರಣ ಮಾಡುವಲ್ಲಿ ವಿಫಲವಾಗಿವೆ. ಸಂವಿಧಾನದ ಮೌಲ್ಯ ಉಳಿಸಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯ ಸಾಕಾರಗೊಳಿಸುವುದೇ ಪಕ್ಷದ ಪ್ರಮುಖ ಗುರಿಯಾಗಿದೆ ಎಂದರು. 
ಸುದ್ದಿಗೋಷ್ಠಿಯಲ್ಲಿ ಗೋಪಾಲಕೃಷ್ಣ ಕುಂದಾಪುರ, ಆನಂದ್​ ಬ್ರಹ್ಮಾವರ, ಪ್ರಶಾಂತ್​ ತೊಟ್ಟಂ, ಪುಷ್ಪಾಕರ್​ ಕೊರಂಗ್ರಪಾಡಿ, ವಿಠ್ಠಲ ಸಾಲಿಕೇರಿ, ಜಿಲ್ಲಾ ಸಮಿತಿ ಸದಸ್ಯ ರಮೇಶ್​ ಕೋಟ್ಯಾನ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net