ಶಾಂತಿನಿಕೇತನ ಜನಸೇವೆ ನಾಡಿಗೆ ಮಾದರಿ

ಶಾಂತಿನಿಕೇತನ ಪ್ರತಿಷ್ಠಾನ ಲೋಕಾರ್ಪಣೆ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ರಾಜೇಶ್ ಕುಡಿಬೈಲ್, ಪ್ರೊ.ಬಿ.ಕರಿಯಣ್ಣ, ಕರುಣಾಕರ ಹೆಗ್ಡೆ ಬೆಂಗಳೂರು, ಸಂಪತ್ ಕುಮಾರ್ ಶೆಟ್ಟಿ, ಡಾ.ಭಾರ್ಗವಿ ಆರ್.ಐತಾಳ್, ನೀರೆ ಕೃಷ್ಣ ಶೆಟ್ಟಿ, ಎಚ್.ಜನಾರ್ದನ್, ಕುಚ್ಚೂರಿನ ಕಿರಣ್ ತೋಳಾರ್, ಹೆಬ್ರಿ ಪ್ರವೀಣ್ ಬಲ್ಲಾಳ್ ಇದ್ದರು.
ಶಾಂತಿನಿಕೇತನ ಪ್ರತಿಷ್ಠಾನ ಲೋಕಾರ್ಪಣೆ ಸಂಭ್ರಮ ಕಾರ್ಯಕ್ರಮವನ್ನು ಶ್ರೀ ಈಶ ವಿಠಲದಾಸ ಸ್ವಾಮೀಜಿ ಉದ್ಘಾಟಿಸಿದರು. ಪ್ರಮುಖರಾದ ರಾಜೇಶ್ ಕುಡಿಬೈಲ್, ಪ್ರೊ.ಬಿ.ಕರಿಯಣ್ಣ, ಕರುಣಾಕರ ಹೆಗ್ಡೆ ಬೆಂಗಳೂರು, ಸಂಪತ್ ಕುಮಾರ್ ಶೆಟ್ಟಿ, ಡಾ.ಭಾರ್ಗವಿ ಆರ್.ಐತಾಳ್, ನೀರೆ ಕೃಷ್ಣ ಶೆಟ್ಟಿ, ಎಚ್.ಜನಾರ್ದನ್, ಕುಚ್ಚೂರಿನ ಕಿರಣ್ ತೋಳಾರ್, ಹೆಬ್ರಿ ಪ್ರವೀಣ್ ಬಲ್ಲಾಳ್ ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಹೆಬ್ರಿ
ಗ್ರಾಮೀಣ ಪ್ರದೇಶ ಕುಚ್ಚೂರು ಪ್ರದೇಶದಲ್ಲಿ ಸಮಾನ ಮನಸ್ಕ ಯುವ ಸಂಘಟನೆ ಮಾಡುವ ಬಹುಸ್ಥರದ ಜನಸೇವೆ ಸಮಾಜದ ಎಲ್ಲರಿಗೂ ತಲುಪುತ್ತಿದೆ. ಈ ಮಹಾನ್ ಕಾರ್ಯ ನಾಡಿಗೆ ಮಾದರಿ. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಹುಟ್ಟಿಕೊಂಡ ಸಂಸ್ಥೆ ಇಂದು ವಿವಿಧ ಹಂತದ ಸೇವೆ ವಿಸ್ತರಿಸುವ ಮೂಲಕ ಖ್ಯಾತಿ ಪಡೆದಿದೆ ಎಂದು ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು.
ಹೆಬ್ರಿ ತಾಲೂಕಿನ ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಸಭಾಂಗಣದಲ್ಲಿ ಭಾನುವಾರ ಶಾಂತಿನಿಕೇತನ ಯುವ ವೃಂದದ ಶಾಂತಿನಿಕೇತನ ಪ್ರತಿಷ್ಠಾನ ಲೋಕಾರ್ಪಣೆ ಸಂಭ್ರಮ ಮತ್ತು ಪಿಎಚ್.ಡಿ ಪಡೆದ ರಾಜೇಶ್ ಅವರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ ಸಂಸ್ಥಾಪಕ ರಾಜೇಶ್ ಕುಡಿಬೈಲ್ ಅಧ್ಯಕ್ಷತೆ ವಹಿಸಿದ್ದರು. ತುಮಕೂರು ವಿವಿ ಕಲಾ ಕಾಲೇಜು ನಿಕಟಪೂರ್ವ ಪ್ರಾಂಶುಪಾಲ ಪ್ರೊ.ಬಿ.ಕರಿಯಣ್ಣ, ಉದ್ಯಮಿಗಳಾದ ಹೆಬ್ರಿ ಮೂಡಲುಮನೆ ಕರುಣಾಕರ ಹೆಗ್ಡೆ ಬೆಂಗಳೂರು, ವಂಡಾರು ಸಂಪತ್ ಕುಮಾರ್ ಶೆಟ್ಟಿ, ಹೆಬ್ರಿ ಶ್ರೀ ರಾಘವೇಂದ್ರ ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷೆ ಡಾ.ಭಾರ್ಗವಿ ಆರ್.ಐತಾಳ್, ಶ್ರೀಕ್ಷೇತ್ರ ಧರ್ಮಸ್ಥಳ ಯೋಜನೆ ಜನಜಾಗೃತಿ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಹೆಬ್ರಿ ಚೈತನ್ಯ ಯುವ ವೃಂದದ ಎಚ್.ಜನಾರ್ದನ್, ಉದ್ಯಮಿ ಕುಚ್ಚೂರಿನ ಕಿರಣ್ ತೋಳಾರ್, ಹೆಬ್ರಿ ಪ್ರವೀಣ್ ಬಲ್ಲಾಳ್, ಗುಜರಾತ್ ಉದ್ಯಮಿ ಬಾದ್ಲು ಹರೀಶ ಶೆಟ್ಟಿ, ವಕೀಲ ರತನ್ ಕುಮಾರ್, ಲ್ಯಾಂಪ್ಸ್ ಸಹಕಾರ ಮಹಾಮಂಡಳದ ನಿರ್ದೇಶಕ ರಾಘವ ನಾಯ್ಕ ಮುದ್ರಾಡಿ, ತುಮಕೂರು ಆಕ್ಸಿಸ್ ಮ್ಯಾಕ್ಸ್ ಲೈಫ್ ಶಾಖಾ ವ್ಯವಸ್ಥಾಪಕ ಮಂಜುನಾಥ ಕೆ.ಆರ್., ಸಮಾಜ ಸೇವಕರಾದ ಕುಚ್ಚೂರು ಶ್ರೀಕಾಂತ್ ಪೂಜಾರಿ, ಬೇಳಂಜೆ ಅಮೃತ್ ಕುಮಾರ್ ಶೆಟ್ಟಿ, ಮಹೇಶ ಶೆಟ್ಟಿ ಬಾದ್ಲು, ಶಾಂತಿನಿಕೇತನ ಯುವ ವೃಂದ ಅಧ್ಯಕ್ಷ ಮಹೇಶ್, ಸಹಕಾರ ಸಂಘದ ಉಪಾಧ್ಯಕ್ಷ ದೀಕ್ಷಿತ್ ನಾಯಕ್, ಶಾಂತಿನಿಕೇತನ ಸಂಸ್ಥೆಗಳ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರ್ದೇಶಕ ಶ್ರೀನಿವಾಸ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ವಿಷ್ಣುಧರನ್ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ನರೇಂದ್ರ ಎಸ್.ಮರಸಣಿಗೆ ಸ್ವಾಗತಿಸಿದರು.

ನಮ್ಮೂರಿನ ಸಮಾನ ಮನಸ್ಕರ ಜನಸಾಮಾನ್ಯರ ಸಂಘಟನೆ ಇಂದು ಜನಸೇವೆ ಮೂಲಕ ಎತ್ತರಕ್ಕೆ ಬೆಳೆದಿದೆ. ನಮ್ಮ ಸೇವೆಗೆ ಸರ್ವರ ಬೆಂಬಲ ಲಭಿಸಿದ ಕಾರಣ ಮತ್ತಷ್ಟು ಸೇವೆ ಮಾಡಲು ಪ್ರೇರಣೆ ದೊರಕಿದೆ. ಇನ್ನು ಹಲವಾರು ಕನಸುಗಳನ್ನು ಸಂಸ್ಥೆ ಕಂಡಿದ್ದು, ಅದಕ್ಕಾಗಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಶಿಕ್ಷಣ, ಆರೋಗ್ಯ, ಪರಿಸರ, ಮಹಿಳಾ ಸಬಲೀಕರಣ, ಯುವಜನರ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣ ಸೇವೆ ಸಲ್ಲಿಸುವ ಸಂಕಲ್ಪವಿದೆ.

— ರಾಜೇಶ್ ಕುಡಿಬೈಲ್, ಸಂಸ್ಥಾಪಕ, ಕುಚ್ಚೂರು ಕುಡಿಬೈಲು ಶಾಂತಿನಿಕೇತನ ಯುವ ವೃಂದ


ಪ್ರಶಸ್ತಿ ಪ್ರದಾನ, ಸನ್ಮಾನ

ಉದ್ಯಮಿ ಸಂಪತ್ ಕುಮಾರ್ ಶೆಟ್ಟಿ ಅವರಿಗೆ ಶಾಂತಿನಿಕೇತನ ಗೌರವ-2026, ಡಾ.ವಾಸುದೇವ್ ಅವರಿಗೆ ಶಾಂತಿನಿಕೇತನ ಸಾಧಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾ ಪೋಷಕ್ ವಿದ್ಯಾರ್ಥಿವೇತನ ವಿತರಣೆ ಮತ್ತು ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಶಾಂತಿನಿಕೇತನ ಜನಸೇವಾ ಸಂಸ್ಥೆಗಳ ಸಂಸ್ಥಾಪಕ ತುಮಕೂರು ವಿವಿ ಕಲಾ ಕಾಲೇಜಿನ ಪ್ರಾಧ್ಯಾಪಕ, ಪಿಎಚ್.ಡಿ ಪಡೆದ ರಾಜೇಶ್ ಕುಡಿಬೈಲ್ ಅವರನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net