ಹದಗೆಟ್ಟ ಶಾಂತಿಗೋಡು-ಆನಡ್ಕ ಸಂಪರ್ಕ ರಸ್ತೆ

 ಶಾಂತಿಗೋಡು-ಆನಡ್ಕ ರಸ್ತೆ ದುರಸ್ತಿಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪಂಚಾಯತ್ ರಾಜ್ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು. ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ ಮೊದಲಾದರಿದ್ದರು.
ಶಾಂತಿಗೋಡು-ಆನಡ್ಕ ರಸ್ತೆ ದುರಸ್ತಿಗಾಗಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪಂಚಾಯತ್ ರಾಜ್ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗೆ ಮನವಿ ಸಲ್ಲಿಸಿದರು. ಅರುಣ್ ಕುಮಾರ್ ಪುತ್ತಿಲ, ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ ಮೊದಲಾದರಿದ್ದರು.
Published on
ಪುತ್ತೂರು ಗ್ರಾಮಾಂತರ: ಸಂಪೂರ್ಣ ಹದಗೆಟ್ಟಿರುವ ಶಾಂತಿಗೋಡು-ಆನಡ್ಕ ರಸ್ತೆಯನ್ನು ದುರಸ್ತಿ ಮಾಡಿ ಸಂಚಾರ ಯೋಗ್ಯವನ್ನಾಗಿಸುವಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪದಾಧಿಕಾರಿಗಳು ಪಂಚಾಯತ್‌ರಾಜ್ ಇಲಾಖೆಯ ಪುತ್ತೂರು ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಮನವಿ ಸಲ್ಲಿಸಿದರು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಟ್ರಸ್ಟ್ ಪದಾಧಿಕಾರಿಗಳಾದ ಉಮೇಶ್ ಕೋಡಿಬೈಲು, ಅನಿಲ್ ತೆಂಕಿಲ, ವಿಶ್ವನಾಥ ಬಲ್ಯಾಯ, ಜಯರಾಮ ಪೂಜಾರಿ, ಲಕ್ಷ್ಮೀಪ್ರಸಾದ್ ಆನಾಜೆ, ಅವಿನಾಶ್ ಪುರುಷರಕಟ್ಟೆ, ರಾಕೇಶ್ ಓಜಾಲ ಅವರು ರಸ್ತೆಯ ದುರವಸ್ಥೆ ಬಗ್ಗೆ ಗಮನ ಸೆಳೆದರು.
ಮನವಿಗೆ ಸ್ಪಂದಿಸಿದ ಪಂಚಾಯತ್‌ರಾಜ್ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಕಾರ್ಯಕ್ರಮದ ಒತ್ತಡದಿಂದ ತಕ್ಷಣ ಸ್ಥಳಕ್ಕೆ ಭೇಟಿ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ನರಿಮೊಗರು ಗ್ರಾಮ ಪಂಚಾಯಿತಿ ಪಿಡಿಒ ಆಶಾ ಅವರಿಗೆ ಕರೆಮಾಡಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಲು ತಿಳಿಸಿದರು.

ಪಿಡಿಒ ಆಶಾ ಸ್ಥಳಕ್ಕೆ ಭೇಟಿ ನೀಡಿದ ವೇಳೆ ಪುತ್ತಿಲ ಪರಿವಾರದ ಪ್ರಮುಖರು ಕೂಡಲೇ ರಸ್ತೆಯನ್ನು ಸಂಚಾರ ಯೋಗ್ಯವನ್ನಾಗಿಸುವಂತೆ ಆಗ್ರಹಿಸಿದರು. ರಸ್ತೆ ಪರಿಸ್ಥಿತಿ ಕುರಿತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಪಿಡಿಒ ತಿಳಿಸಿದರು.

ಕಾಂಕ್ರೀಟೀಕರಣಕ್ಕೆ ಬೇಡಿಕೆ

ನರಿಮೊಗರು ಗ್ರಾಮದ ಪುರುಷರಕಟ್ಟೆಯಿಂದ ಶಾಂತಿಗೋಡು ಮೂಲಕವಾಗಿ ಆನಡ್ಕ ಸಂಪರ್ಕದ ರಸ್ತೆಯಲ್ಲಿ ಮಾಯಂಗಲದಿಂದ ಕೂಡುರಸ್ತೆಯ ತನಕ ಅಲ್ಲಲ್ಲಿ ಹೊಂಡ-ಗುಂಡಿಗಳು ನಿರ್ಮಾಣವಾಗಿ ರಸ್ತೆ ಸಂಪೂರ್ಣ ಹದಗೆಟ್ಟು ವಾಹನ ಸಂಚಾರ ದುಸ್ತರವಾಗಿದೆ. ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಯೋಗ್ಯವನ್ನಾಗಿಸಬೇಕು. ಅಲ್ಲದೆ ಈ ರಸ್ತೆಯನ್ನು ಬಿಂದು ಫ್ಯಾಕ್ಟರಿಯ ಬಳಿಯಿಂದ ಕೂಡುರಸ್ತೆ ತನಕ ಐದೂವರೆ ಮೀಟರ್ ಅಗಲಗೊಳಿಸಿ ಕಾಂಕ್ರೀಟೀಕರಣ ಕಾಮಗಾರಿ ನಡೆಸಿ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net