ಪ್ರತಿದಿನವೂ ತನಗೆ ಮಾನಸಿಕ ಕಿರುಕುಳ ನೀಡುತ್ತಾರೆ ಎಂದು ಪುತ್ರ ಶಾಹೀದ್ ಅಲಿ ತನ್ನ ತಂದೆ ಮೆಹಬೂಬ್ ಅಲಿ ಹಾಗೂ ತಾಯಿ ಸಂಶಾದ್ ಬೇಗಂ ಅವರನ್ನು ಮನೆಯಲ್ಲಿಯೇ ಸಂಜೆ 7 ಗಂಟೆಯ ವೇಳೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದನು. ರಾತ್ರಿಯಿಡೀ ಶವದ ಜತೆಯಲ್ಲೇ ಇದ್ದ ಆತ, ಆ.24ರಂದು ಬೆಳಗ್ಗೆ 9 ಗಂಟೆಗೆ ಆತನೇ ಪೊಲೀಸರಿಗೆ ಕರೆ ಮಾಡಿ ಅಪ್ಪ-ಅಮ್ಮನನ್ನು ಕೊಂದಿದ್ದಾಗಿ ಮಾಹಿತಿ ನೀಡಿದ್ದನು. ಸ್ಥಳಕ್ಕೆ ತೆರಳಿದ್ದ ಬ್ರಹ್ಮಾವರ ಠಾಣೆ ಪೊಲೀಸರು ಆರೋಪಿ ಶಾಹೀದ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.