ಬಾಲಕಿಯರಿಬ್ಬರೂ ಸ್ನೇಹಿತೆಯ ಮನೆಗೆ ತೆರಳುವುದಾಗಿ ತಮ್ಮ ಮನೆಯಿಂದ ಹೊರಟಿದ್ದರು. ರಿಜ್ವಾನ್ ಮತ್ತು ಮೊಹಮ್ಮದ್ ಇಬ್ಬರನ್ನೂ ಕಾರಿನಲ್ಲಿ ಉಳ್ಳಾಲ ಸನಿಹದ ವಸತಿಗೃಹವೊಂದಕ್ಕೆ ಕರೆದೊಯ್ದು, ಅತ್ಯಾಚಾರವೆಸಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಕ್ಕಳಿಬ್ಬರು ನಾಪತ್ತೆಯಾಗಿರುವ ಬಗ್ಗೆ ಸಂಬಂಧಿಕರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸೈಬರ್ ಸೆಲ್ ಸಹಾಯದಿಂದ ತನಿಖೆ ನಡೆಸಿದಾಗ ತಲಪಾಡಿ ಆಸುಪಾಸು ಇಬ್ಬರು ಆರೋಪಿಗಳು ಪತ್ತೆಯಾಗಿದ್ದಾರೆ. ಪೊಲೀಸರು ಬಾಲಕಿಯರಿಬ್ಬರಿಂದ ಹೇಳಿಕೆ ದಾಖಲಿಸಿಕೊಳ್ಳುವ ಮಧ್ಯೆ ದೌರ್ಜನ್ಯದ ಮಾಹಿತಿ ಲಭಿಸಿದೆ.