ದೇಶದ ಒಳಿತಿಗಾಗಿ ಮೋದಿ ರಾಜಕಾರಣ: ಸಂಸದ ಕೋಟ ಶ್ರೀನಿವಾಸ್​ ಪೂಜಾರಿ

ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ 25 ವರ್ಷಗಳ ಜನಕಲ್ಯಾಣದ ಆಡಳಿತ ಹಿನ್ನೆಲೆಯಲ್ಲಿ ಪುರಭವನದಲ್ಲಿ ಬುಧವಾರ ನಡೆದ ಸೇವಾಜ್ಯೋತಿ ಯಾತ್ರೆ
bjp modi
ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ಸೇವಾಜ್ಯೋತಿ ಯಾತ್ರೆ ಉದ್ಘಾಟಿಸಿದರು.
Published on: 

ಉಡುಪಿ: ನರೇಂದ್ರ ಮೋದಿ ಜಗತ್ತು ಮೆಚ್ಚುವ ನಾಯಕರಾಗಿದ್ದಾರೆ. ದೇಶದ ಒಳಿತಿಗಾಗಿ ರಾಜಕಾರಣ ಮಾಡುತ್ತಿದ್ದಾರೆ. ಸ್ವಾತಂತ್ರದ 100 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ವಿಕಸಿತ ಭಾರತ-2047 ಪರಿಕಲ್ಪನೆಯೊಂದಿಗೆ ದೇಶದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ದೇಶದಲ್ಲಿ 18,000 ಹಳ್ಳಿಗಳಲ್ಲಿ ವಿದ್ಯುತ್​ ಸಂಪರ್ಕ, 12 ಕೋಟಿ ಶೌಚಾಲಯ ನಿರ್ಮಾಣ ಸಣ್ಣ ಸಾಧನೆಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ್​ ಪೂಜಾರಿ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ನಿರಂತರ 25 ವರ್ಷಗಳ ಜನಕಲ್ಯಾಣದ ಆಡಳಿತ ಹಿನ್ನೆಲೆಯಲ್ಲಿ ಪುರಭವನದಲ್ಲಿ ಬುಧವಾರ ನಡೆದ ಸೇವಾಜ್ಯೋತಿ ಯಾತ್ರೆ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿರುವ ಚಿನ್ನವನ್ನು ಸಾಲಕ್ಕಾಗಿ ಅಡವಿಡುವ ಸಂದರ್ಭವಿತ್ತು. ಪ್ರಸಕ್ತ ಭಾರತವು 68 ದೇಶಗಳಿಗೆ ಸಾಲ ನೀಡುವ ಮಟ್ಟಕ್ಕೆ ಬೆಳೆದಿದೆ. ಅದಕ್ಕೆ ಕಾರಣ ಪ್ರಧಾನ ಮಂತ್ರಿ ನರೇಂದ್ರ ಮೋದಿ. ಅವರ ಕೊಡುಗೆಗಳನ್ನು ಜನರಿಗೆ ಜನರಿಗೆ ತಲುಪಿಸುವ ಸಲುವಾಗಿ ಸೇವಾಜ್ಯೋತಿ ಯಾತ್ರೆ ನಡೆಸಲಾಗುತ್ತಿದೆ ಎಂದರು.

ಭಾರತೀಯರಿಗೆ ಕಾಂಗ್ರೆಸ್​ ಅವಮಾನ

ದೇಶವನ್ನು ಒಗ್ಗೂಡಿಸಿದ ವಂದೇ ಮಾತರಂ ಹಾಡಿಗೆ ವಿರೋಧ, ಮತದಾರರಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್​) ವಿರುದ್ಧ ಮುಖ್ಯ ಚುನಾವಣಾಧಿಕಾರಿಯವ ಮುಂದೆ ಹೋಗಿ ಬೆದರಿಕೆ ಮುಂತಾದ ಕೆಲಸಗಳಿಂದ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆಯುವ ಭರದಲ್ಲಿ ದೇಶದ ಜನರನ್ನು ಅಪಮಾನಿಸುತ್ತಿದ್ದಾರೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಶಾಸಕರಾದ ವಿ. ಸುನೀಲ್​ ಕುಮಾರ್​, ಯಶ್​ಪಾಲ್​ ಸುವರ್ಣ, ಗುರ್ಮೆ ಸುರೇಶ್​ ಶೆಟ್ಟಿ, ಕಿರಣ್​ ಕುಮಾರ್​ ಕೊಡ್ಗಿ, ಗುರುರಾಜ್​ ಗಂಟಿಹೊಳೆ, ರಾಜ್ಯ ಕಾರ್ಯಕಾರಿಣಿ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ, ಎಸ್​ಐಆರ್​ ಅಭಿಯಾನ ಮಂಗಳೂರು ವಿಭಾಗ ಉಸ್ತುವಾರಿ ಉದಯ ಕುಮಾರ್​ ಶೆಟ್ಟಿ ಕಿದಿಯೂರು, ಎಸ್​ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ದಿನಕರ ಬಾಬು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಸುವರ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದಿನಕರ ಶೆಟ್ಟಿ ಹೆರ್ಗ, ರೇಷ್ಮಾ ಉದಯ ಶೆಟ್ಟಿ, ಅಲೆವೂರು ಶ್ರೀಕಾಂತ ನಾಯಕ್​ ಮುಂತಾದವರಿದ್ದರು.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್​ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net