5 ಕೋಟಿ ರೂ. ಯೋಜನೆ ಅಡಿಯಲ್ಲಿ ಮಂಜೂರಾದ ಐದೂ ಶಾಲೆಗಳ ನಿರ್ವಾಣ ಪೂರ್ಣಗೊಂಡಿವೆ. 3 ಕೋಟಿ ರೂ. ಯೋಜನೆಗಳ ಅಡಿಯಲ್ಲಿ ಮಂಜೂರಾದ 27ಶಾಲೆಗಳ ಪೈಕಿ 14 ಪೂರ್ಣಗೊಂಡಿದ್ದು, 1 ಕೋಟಿ ಯೋಜನೆಯಲ್ಲಿರುವ 53 ಶಾಲೆಗಳ ಪೈಕಿ 35 ಕಟ್ಟಡ ನಿರ್ಮಾಣ ಮುಕ್ತಾಯಗೊಂಡಿದೆ. ಪೈವಳಿಕೆ ನಗರದ ಸರ್ಕಾರಿ ಉನ್ನತ ಪ್ರೌಢಶಾಲೆ, ಪೆರಡಾಲದ ಜಿಎಚ್‌ಎಸ್‌ಎಸ್, ದೇಲಂಪಾಡಿಯ ಜಿವಿಎಸ್‌ಎಸ್‌ಎಸ್, ಅಡೂರಿನ ಜಿಎಚ್‌ಎಸ್‌ಎಸ್, ಪಾಣತ್ತೂರಿನ ಜಿಡಬ್ಲ್ಯುಎಚ್‌ಎಸ್‌ಎಸ್, ಕಾಲಿಚ್ಚಾನಡ್ಕ ಹಾಗೂ ಕೊಟ್ಟೋಡಿಯ ಜಿಎಚ್‌ಎಸ್‌ಎಸ್ ಶಾಲೆಗಳು ೆಬ್ರವರಿ ಅಂತ್ಯದೊಳಗೆ ಉದ್ಘಾಟನೆಗೊಳ್ಳಲಿವೆ ಎಂದು ವಿದ್ಯಾಕಿರಣಂ ಜಿಲ್ಲಾ ಸಂಯೋಜಕ ಟಿ. ಪ್ರಕಾಶನ್ ಮಾಹಿತಿ ನೀಡಿದ್ದಾರೆ.