ಮಳೆ ಹಾನಿ ಪ್ರದೇಶದಲ್ಲಿ ಶೌರ್ಯ ತಂಡದ ಸೇವಾ ಕಾರ್ಯ

 ಗುಂಡ್ಮಿ ಪಾತಾಳಬೆಟ್ಟು ಪರಿಸರದಲ್ಲಿ ಧರೆಗುರುಳಿದ ಬೃಹತ್ ಗಾತ್ರದ ಮರವನ್ನು ತೆರವುಗೊಳಿಸಲಾಯಿತು. ಶೌರ್ಯ ತಂಡದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಯೋಗೀಶ ಆಚಾರ್ಯ, ಸತೀಶ್, ರೇಣುಕಾ, ವಿಜಯಶ್ರೀ, ಘಟಕ ಪ್ರತಿನಿಧಿ ಶೋಭಾ, ಮೆಸ್ಕಾಂ ಸಿಬ್ಬಂದಿ ಅನಿಲ್, ಕುಮಾರ ಮತ್ತಿತರರಿದ್ದರು.

Published on
ಕೋಟ: ಇತ್ತೀಚೆಗೆ ಸುರಿದ ಬಾರಿ ಗಾಳಿ-ಮಳೆಗೆ ಸಾಸ್ತಾನದ ಸಮೀಪ ಗುಂಡ್ಮಿ ಪಾತಾಳಬೆಟ್ಟು ಪರಿಸರದಲ್ಲಿ ಬೃಹತ್ ಗಾತ್ರದ ಮರದ ಕೊಂಬೆ ವಿದ್ಯುತ್ ಕಂಬದ ಮೇಲೆರಗಿ ರಸ್ತೆ ಸಂಪರ್ಕ ಕಡಿತಗೊಂಡು ಸಾರ್ವಜನಿಕರಿಗೆ ಸಮಸ್ಯೆ ತಂದೊಡ್ಡಿತು.
ಈ ಹಿನ್ನೆಲ್ಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋ ಶೌರ್ಯ ಟೀಮ್‌ನ ಸದಸ್ಯರು ಮತ್ತು ಮೆಸ್ಕಾಂ ಸಿಬ್ಬಂದಿ ಮೂಲಕ ಮರ ತೆರವುಗೊಳಿಸಿ, ವಿದ್ಯುತ್ ತಂತಿ ಹಾಗೂ ರಸ್ತೆ ಸರಿಪಡಿಸಿ, ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.
ಶೌರ್ಯ ತಂಡದ ಕಾಳಿಂಗ ಪೂಜಾರಿ, ರವಿ ಪೂಜಾರಿ, ಯೋಗೀಶ ಆಚಾರ್ಯ, ಸತೀಶ್, ರೇಣುಕಾ, ವಿಜಯಶ್ರೀ, ಘಟಕ ಪ್ರತಿನಿಧಿ ಶೋಭಾ ಮತ್ತು ಮೆಸ್ಕಾಂ ಸಿಬ್ಬಂದಿ ಅನಿಲ್, ಕುಮಾರ ಹಾಗೂ ಸ್ಥಳೀಯರಾದ ಸುಂದರ, ಸಂತೋಷ ಸಹಕರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net