ಸಾಸ್ತಾನ ಟೋಲ್ ವ್ಯಾಪ್ತಿಯ ಸರ್ವೀಸ್ ರಸ್ತೆ ನಿರ್ಮಾಣ ಕಾಮಗಾರಿ ತೆಕ್ಕಟ್ಟೆ, ಕುಂಭಾಶಿ, ಸಾಲಿಗ್ರಾಮ ವ್ಯಾಪ್ತಿಯಲ್ಲಿ ಅರೆಬರೆಯಾಗಿ ನಡೆದಿದ್ದು, ಪ್ರಸ್ತುತ ಕಾಮಗಾರಿ ಸ್ಥಗಿತಗೊಂಡಿದೆ. ಹೆಚ್ಚಿನ ಭಾಗದಲ್ಲಿ ಸಾರ್ವಜನಿಕರಿಗೆ ಸಂಚಾರಕ್ಕೆ ಪುಟ್‌ಪಾತ್ ಇಲ್ಲವಾಗಿದೆ. ಸರ್ವೀಸ್ ರಸ್ತೆ ಖಾಸಗಿ ಸ್ಥಳದಾರರ ಕಾಂಪೌಂಡ್‌ವರೆಗೆ ವಿಸ್ತರಣೆಗೊಂಡಿದ್ದು, ಪಾದಚಾರಿಗಳಿಗೆ ದಾರಿಯೇ ಇಲ್ಲದಂತಾಗಿದೆ ಎಂಬ ಆರೋಪವೂ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.