ಪ್ರತ್ಯೇಕ ಪ್ರಕರಣ, ಮೂವರ ಬಂಧನ

Arrest
Arrest
Published on

ಬೈಂದೂರು: ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಲ ಗ್ರಾಮದಲ್ಲಿ ಜಾತಿ ನಿಂದನೆ ಮತ್ತು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ನೊಂದ ಮಹಿಳೆಯ ದೂರಿನ ಪ್ರಕಾರ ಸನತ್ ಕುಂದಾಪುರ ಎಂಬುವರು ಅವರ ಮನೆ ಹತ್ತಿರ ಬಂದು ವಾನಕ್ಕೆ ಕುಂದುಂಟಾಗುವಂತೆ ವರ್ತಿಸಿದ್ದಾರೆ ಮತ್ತು ಜಾತಿ ನಿಂದನೆ ವಾಡಿದ್ದಾರೆ. ಈ ದೂರಿನ್ವಯ ಪೊಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆರೋಪಿ ಸನತ್ ಕುಂದಾಪುರನನ್ನು ಬಂಧಿಸಲಾಗಿದೆ.
ನೊಂದ ಮಹಿಳೆ ಕುಟುಂಬಸ್ಥರು ನನ್ನನ್ನು ಮರಕ್ಕೆ ಕಟ್ಟಿ ಹಲ್ಲೆ ನಡೆಸಿದ್ದಾರೆ ಎಂದು ಸನತ್ ಕುಂದಾಪುರ ಪ್ರತಿದೂರು ದಾಖಲಿಸಿದ ಅನ್ವಯ ಕೊಲೆಯತ್ನ ಮತ್ತು ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೊಲ್ಲೂರು ಠಾಣೆ ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net