ಕ್ರೀಡೆಗೆ ಭದ್ರ ಅಡಿಪಾಯವಿತ್ತ ಬಬ್ಬಣ್ಣ

ಉಡುಪಿಯಲ್ಲಿ ಹಿರಿಯ ಕ್ರೀಡಾಪಟು, ವಾಲಿಬಾಲ್ ತರಬೇತುದಾರ ಪಾಂಗಾಳ ವಾಸುದೇವ ನಾಯಕ್​ ಹಾಗೂ ನಂದಿನಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂತೋಷ್​ ಶೆಟ್ಟಿ, ವಿಜಯ್​ ಹೆಗ್ಡೆ, ಸತ್ಯಜಿತ್​ ಶೆಟ್ಟಿ, ಜಿನರಾಜ್​ ಎಮಾರ್ಳ್​, ಶರತ್​ ಕುಮಾರ್​, ನಯನಾ ಗಣೇಶ್​, ಸ್ಪೈಕರ್ಸ್​​ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಇದ್ದರು.
ಉಡುಪಿಯಲ್ಲಿ ಹಿರಿಯ ಕ್ರೀಡಾಪಟು, ವಾಲಿಬಾಲ್ ತರಬೇತುದಾರ ಪಾಂಗಾಳ ವಾಸುದೇವ ನಾಯಕ್​ ಹಾಗೂ ನಂದಿನಿ ದಂಪತಿಯನ್ನು ಸನ್ಮಾನಿಸಲಾಯಿತು. ಸಂತೋಷ್​ ಶೆಟ್ಟಿ, ವಿಜಯ್​ ಹೆಗ್ಡೆ, ಸತ್ಯಜಿತ್​ ಶೆಟ್ಟಿ, ಜಿನರಾಜ್​ ಎಮಾರ್ಳ್​, ಶರತ್​ ಕುಮಾರ್​, ನಯನಾ ಗಣೇಶ್​, ಸ್ಪೈಕರ್ಸ್​​ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು ಇದ್ದರು.
Published on

* ಉದ್ಯಮಿ ಸಂತೋಷ್​ ಶೆಟ್ಟಿ ಶ್ಲಾಘನೆ

* ವಾಲಿಬಾಲ್​ ತರಬೇತುದಾರ ವಾಸುದೇವ್​ಗೆ ಸನ್ಮಾನ

ಉಡುಪಿ: ವಾಲಿಬಾಲ್​ ಕ್ರೀಡೆಗೆ ಭದ್ರ ಅಡಿಪಾಯ ಹಾಕಿದ ಹಿರಿಯ ಕ್ರೀಡಾಪಟು ಹಾಗೂ ತರಬೇತುದಾರ ಬಬ್ಬಣ್ಣ ಅವರು ಸ್ಥಾಪಿಸಿದ ಸ್ಪೈಕರ್ಸ್​ ತಂಡವು ಉಡುಪಿ  ಜಿಲ್ಲೆಯ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ. ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವಲ್ಲಿ ಅವರ ಪಾತ್ರ ಸದಾ ಸ್ಮರಣೀಯ ಎಂದು ಉದ್ಯಮಿ ಸಂತೋಷ್​ ಶೆಟ್ಟಿ ಶ್ಲಾಘಿಸಿದರು.
ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಸ್ಪೈಕರ್ಸ್​ ತಂಡದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಕ್ರೀಡಾಪಟು, ವಾಲಿಬಾಲ್​ ತರಬೇತುದಾರ ಪಾಂಗಾಳ ವಾಸುದೇವ ನಾಯಕ್​ (ಬಬ್ಬಣ್ಣ) ಅವರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಅನನ್ಯ ಸಾಧನೆ

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಜಯ್​ ಹೆಗ್ಡೆ, ಸತ್ಯಜಿತ್​ ಶೆಟ್ಟಿ, ಜಿನರಾಜ್​ ಎಮಾರ್ಳ್​, ಶರತ್​ ಕುಮಾರ್​ ಇತರರು ಮಾತನಾಡಿ, ಬಬ್ಬಣ್ಣ ಅವರ ಕ್ರೀಡಾ ಸಾಧನೆ ಹಾಗೂ ವ್ಯಕ್ತಿತ್ವ ಶ್ರೇಷ್ಠವಾಗಿದೆ. ನೂರಾರು ಕ್ರೀಡಾಪಟುಗಳ ಬದುಕಿಗೆ ದಿಕ್ಕು ತೋರಿದ ಮಾರ್ಗದರ್ಶಕರಾಗಿದ್ದಾರೆ. ಜಿಲ್ಲೆಯಲ್ಲಿ ವಾಲಿಬಾಲ್​ ಕ್ರೀಡೆಯ ಬೆಳವಣಿಗೆಯಲ್ಲಿ ಅವರ ಕೊಡುಗೆ ಅನನ್ಯ. ಅನೇಕ ಪ್ರತಿಭಾವಂತ ಆಟಗಾರರು ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಅವರ ಮಾರ್ಗದರ್ಶನವೇ ಕಾರಣವಾಗಿದೆ ಎಂದರು.
ಕುರ್ಕಾಲು ವಾಲಿಬಾಲ್​ ತಂಡ, ಬೈಲೂರು ಮಿತ್ರ ಮಂಡಳಿ, ಕುಂದಾಪುರ ವಾಲಿಬಾಲ್​ ತಂಡ, ಸ್ಪೈಕರ್ಸ್​ ತಂಡದ ಸದಸ್ಯರು, ಹಳೆಯ ವಿದ್ಯಾರ್ಥಿಗಳು, ಕ್ರೀಡಾಪಟುಗಳು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.
ನಯನಾ ಗಣೇಶ್​ ಅಭಿನಂದನಾ ಪತ್ರ ವಾಚಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಅರುಣ್​ ಶೆಟ್ಟಿ ವಂದಿಸಿದರು. ವಿನೋದ್​ ಗುರುಪ್ರಸಾದ್​ ಕಾರ್ಯಕ್ರಮ ನಿರೂಪಿಸಿದರು.
"

ಕ್ರೀಡೆಯು ವ್ಯಕ್ತಿತ್ವ ವಿಕಸನಕ್ಕೆ ಅತ್ಯುತ್ತಮ ಮಾಧ್ಯಮವಾಗಿದೆ. ನನಗೆ ದೊರೆತಿರುವ ಈ ಸನ್ಮಾನವು ಇನ್ನಷ್ಟು ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡಲು ಪ್ರೇರಣೆ ನೀಡಿದೆ. ಕ್ರೀಡಾ ಕ್ಷೇತ್ರದಲ್ಲಿ ನನಗೆ ಬೆಂಬಲ ನೀಡಿದ ಸಹ ಆಟಗಾರರು, ವಿದ್ಯಾರ್ಥಿಗಳು ಹಾಗೂ ಸ್ನೇಹಿತರನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳುತ್ತೇನೆ.

— ಪಾಂಗಾಳ ವಾಸುದೇವ ನಾಯಕ್​ (ಬಬ್ಬಣ್ಣ). ಹಿರಿಯ ಕ್ರೀಡಾಪಟು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net