ಉಡುಪಿಯಲ್ಲಿ ಹಿರಿಯ ಸಾಹಿತಿ ಯು.ಶ್ರೀಧರ್ ಅವರಿಗೆ 'ಸೇವಾಭೂಷಣ' ಪ್ರಶಸ್ತಿ ಪ್ರದಾನ ಮಾಡಲಾಯಿತು. ಕರ್ನಲ್ ಮಾಧವ ಶ್ಯಾನಭಾಗ್, ಡಾ. ವಿರೂಪಾಕ್ಷ ದೇವರಮನೆ, ಎಂ.ಗಂಗಾಧರ್, ಎಸ್.ವಿ. ಭಟ್, ವಿ.ಜಿ. ಭಟ್, ಮುರಳಿ ಕಡೆಕಾರ್, ಸದಾಶಿವ್ ರಾವ್, ವಿದ್ಯಾ ಪ್ರಸಾದ್ ಇದ್ದರು.
Published on:
Copied
Follow Us
* ವಿದ್ಯಾರ್ಥಿಗಳಿಗೆ ಯು.ಶ್ರೀಧರ್ ಕಿವಿಮಾತು
* 'ಸೇವಾಭೂಷಣ' ಪ್ರಶಸ್ತಿ ಸ್ವೀಕಾರ
ಉಡುಪಿ: ಶಾಲೆಯಲ್ಲಿ ಶಿಕ್ಷಕರು ಬೋಧಿಸಿದ ಪಾಠಗಳನ್ನು ಸರಿಯಾಗಿ ಕೇಳಿ ಅರ್ಥೈಸಿಕೊಳ್ಳಬೇಕು. ಶಾಲೆಯ ಪಠ್ಯವಲ್ಲದೆ ಜೀವನಕ್ಕೆ ಅನುಭವ ನೀಡುವ, ಹೆಚ್ಚಿನ ಜ್ಞಾನ ಒದಗಿಸುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಓದುವಂತಾಗಬೇಕು. ಜೀವನದಲ್ಲಿ ಸತ್ಯವಂತರಾಗಿ ಬಾಳಬೇಕು. ಸತ್ಯವೇ ಜೀವನವಾಗಬೇಕು ಎಂದು ಬ್ಯಾಂಕ್ನ ನಿವೃತ್ತ ಉದ್ಯೋಗಿ, ಹಿರಿಯ ಸಾಹಿತಿ ಯು. ಶ್ರೀಧರ್ ಕಿವಿಮಾತು ಹೇಳಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಸಂಸ್ಥೆಯ ವಿದ್ಯಾಪೋಷಕ್ ಪಿಯುಸಿ ವಿದ್ಯಾರ್ಥಿಗಳಿಗೆ ನಡೆಯುತ್ತಿರುವ 'ಜೀವನ ವಿದ್ಯಾ' ಶೈಕ್ಷಣಿಕ ಶಿಬಿರದಲ್ಲಿ ಶುಕ್ರವಾರ (ಫೆ.27) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದ ಎಸ್.ಗೋಪಾಲಕೃಷ್ಣ ಹಾಗೂ ಎಚ್.ಎನ್. ಶೃಂಗೇಶ್ವರ್ ಸ್ಮರಣಾರ್ಥ 2026ನೇ ಸಾಲಿನ 'ಸೇವಾಭೂಷಣ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಪ್ರಾಮಾಣಿಕ ಗುಣವಿರಲಿ
ಡಾ. ಜಿ.ಎನ್. ಭಟ್ ಮಾತನಾಡಿ, ಪ್ರಾಮಾಣಿಕವಾಗಿ ದುಡಿದಾಗ ದೇವರಿಗೆ ಬಹಳ ಹತ್ತಿರವಾಗುತ್ತೇವೆ. ಅಂತಹವರ ಜೀವನದಲ್ಲಿ ದೇವರು ಅನೇಕ ಪವಾಡಗಳನ್ನು ಮಾಡುತ್ತಾರೆ. ಇದು ಅನುಭವ ಪಡೆದವರಿಗೆ ಮಾತ್ರ ಅರ್ಥವಾಗುತ್ತದೆ. ವಿದ್ಯಾರ್ಥಿಗಳೂ ಸಹ ಪ್ರಾಮಾಣಿಕ ಗುಣ ಬೆಳೆಸಿಕೊಳ್ಳಬೇಕು ಎಂದರು.
ಖ್ಯಾತ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ಆಶಯ ಭಾಷಣ ಮಾಡಿದರು. ಕರ್ನಲ್ ಮಾಧವ ಶ್ಯಾನಭಾಗ್, ಸಂಸ್ಥೆಯ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಭಟ್ ಉಪಸ್ಥಿತರಿದ್ದರು.
ವಿದ್ಯಾಪೋಷಕ್ ವಿದ್ಯಾರ್ಥಿನಿ ಕೃಪಾ ಪ್ರಕಾಶ್ ಆಚಾರ್ಯ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ಪರಿಚಯಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಳಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ವಿದ್ಯಾ ಪ್ರಸಾದ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದೇಶದಲ್ಲಿರುವ ವಿದ್ಯಾಪೋಷಕ್ ಹಳೆಯ ವಿದ್ಯಾರ್ಥಿಗಳೊಂದಿಗೆ ಪ್ರಸ್ತುತ ವಿದ್ಯಾರ್ಥಿಗಳು ಸಂವಾದ ನಡೆಸಿದರು.
"
ಕಲಿಕೆಗೆ ವಯಸ್ಸಿನ ಕೊನೆ ಎನ್ನುವುದಿಲ್ಲ. ಅದಕ್ಕೆ ಯು.ಶ್ರೀಧರ್ ಜೀವನವೇ ನಿದರ್ಶನ. 73ನೇ ವಯಸ್ಸಿನ ಬಳಿಕ ಅವರು 5 ಪುಸ್ತಕ ಬರೆದಿದ್ದಾರೆ. ಜೀವನ ಪ್ರೀತಿಯನ್ನು ಯಾವತ್ತೂ ಕಳೆದುಕೊಳ್ಳಬಾರದು. ಪ್ರೀತಿ ಮತ್ತು ಸೇವೆ ಬದುಕಿನ ಸತ್ಯಗಳು. ಇದಕ್ಕೆ ಹಣ ತೆರಬೇಕಿಲ್ಲ. ಸೇವೆಯಿಂದ ಆತ್ಮ ಜಾಗೃತಿಯಾಗಿ ಅಹಂಕಾರ ನಾಶವಾಗುತ್ತದೆ.