ಬೆಂಗಳೂರಿನ ಯಕ್ಷಗಾನ ಅಕಾಡೆಮಿಯ ಕಚೇರಿಯಲ್ಲಿ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ ಪುಸ್ತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ತಲ್ಲೂರು ಶಿವರಾಮ ಶೆಟ್ಟಿ, ನಮ್ರತಾ ಎನ್., ಕೊಪ್ಪಲ ಮೋಹನ ಕದ್ರಿ, ಪೃಥ್ವಿ ರಾಜೇಶಕುಮಾರ್, ಪುಟ್ಟಸ್ವಾಮಿ ಎ.ಆರ್., ವಿದ್ಯಾಧರ ವಿ. ಜಲವಳ್ಳಿ, ರಾಘವ ಎಚ್. ಇದ್ದರು.
Published on:
Copied
Follow Us
* ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಮತ
* ಕೆರೆಮನೆ ಶಿವಾನಂದ ಹೆಗಡೆಗೆ ಪುಸ್ತಕ ಪ್ರಶಸ್ತಿ ಪ್ರದಾನ
ಉಡುಪಿ: ಖ್ಯಾತ ದಿಗ್ಗಜ ಕಲಾವಿದರಾಗಿದ್ದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕೆರೆಮನೆ ಶಿವರಾಮ ಹೆಗಡೆ, ಕೆರೆಮನೆ ಶಂಭು ಹೆಗಡೆ ಇವರಿಂದ ಯಕ್ಷಗಾನದ ಖ್ಯಾತಿಯೂ ಹೆಚ್ಚಿದೆ. ಇವರ ಕುಟುಂಬದ ರಕ್ತದಲ್ಲಿಯೇ ಯಕ್ಷಗಾನದ ಕಲೆಯಿದೆ. ಮೂರನೇ ತಲೆಮಾರಿನ ಶಿವರಾಮ ಹೆಗಡೆ ಅವರೂ ಸಹ ಯಕ್ಷಗಾನ ಬೆಳೆಸುವಲ್ಲಿ ನಿರತರಾಗಿದ್ದಾರೆ. ಪಾರಂಪರಿಕ ಯಕ್ಷಗಾನ ಕಲೆ ಉಳಿಸುವಲ್ಲಿ ಕೆರೆಮನೆ ಕುಟುಂಬದ ಕೊಡುಗೆ ದೊಡ್ಡದು ಎಂದು ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಭಿಮತ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಯಕ್ಷಗಾನ ಅಕಾಡೆಮಿಯಲ್ಲಿ ಬುಧವಾರ (ಜೂ.10) ಆಯೋಜಿಸಿದ್ದ ಸ್ಥಾಯಿ ಸಮಿತಿ ಸಭೆಯಲ್ಲಿ ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ, ಗುಣವಂತೆಯ ಕೆರೆಮನೆ ಶಿವಾನಂದ ಹೆಗಡೆ ಅವರಿಗೆ 2024ನೇ ಸಾಲಿನ ಪುಸ್ತಕ ('ಆಟದ ಮೇಳ' ಎಂಬ ಕೃತಿ) ಪ್ರಶಸ್ತಿ ಪ್ರದಾನಗೊಳಿಸಿ ಮಾತನಾಡಿದರು.
ಅಕಾಡೆಮಿಯ ರಿಜಿಸ್ಟ್ರಾರ್ ನಮ್ರತಾ ಎನ್. ಸದಸ್ಯರಾದ ಕೊಪ್ಪಲ ಮೋಹನ ಕದ್ರಿ, ಪೃಥ್ವಿ ರಾಜೇಶಕುಮಾರ್, ಪುಟ್ಟಸ್ವಾಮಿ ಎ.ಆರ್., ವಿದ್ಯಾಧರ ವಿ. ಜಲವಳ್ಳಿ ಉಪಸ್ಥಿತರಿದ್ದರು. ಸದಸ್ಯ ರಾಘವ ಎಚ್. ಕಾರ್ಯಕ್ರಮ ನಿರ್ವಹಿಸಿದರು.
"
ಯಕ್ಷಗಾನ ಶ್ರೇಷ್ಠವಾದ ಪಾರಂಪರಿಕ ಕಲೆ. ಅದನ್ನು ಉಳಿಸಿ, ಬೆಳೆಸುವ ಹೊಣೆ ಎಲ್ಲ ಕಲಾವಿದರದು. ಅಕಾಡೆಮಿಯಿಂದಲೂ ಕಲೆ-ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ಲಭಿಸುವಂತಾಗಲಿ. ಪುಸ್ತಕ ಪ್ರಶಸ್ತಿಗೆ ನನ್ನನ್ನು ಗುರುತಿಸಿದ ಅಕಾಡೆಮಿಗೆ ಕೃತಜ್ಞತೆ ಸಲ್ಲಿಸುತ್ತೇನೆ.