ಪಂಚಾಯಿತಿ ಅಧಿಕಾರಿಗಳ ದಿಢೀರ್ ಭೇಟಿ ಮತ್ತು ನೋಟಿಸ್ ಕ್ರಮವನ್ನು ಮೀನು ವ್ಯಾಪಾರಿಗಳು ಕಟುವಾಗಿ ಟೀಕಿಸಿದ್ದು, ಲಕ್ಷಾಂತರ ರೂ. ನೀಡಿ ಹರಾಜು ಪಡೆದರೂ ಮಾರುಕಟ್ಟೆಯಲ್ಲಿ ಕನಿಷ್ಠ ಸೌಲಭ್ಯಗಳಿಲ್ಲ. ಹಿಂಭಾಗದ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಗಬ್ಬು ನಾರುತ್ತಿದೆ. ಅಧಿಕಾರಿಗಳು ಮೊದಲು ಸ್ವಚ್ಛತೆಯತ್ತ ಗಮನಹರಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.