ಆತ್ಮಗೌರವ, ನಿಸ್ವಾರ್ಥದಿಂದ ದೇಶ ಸೇವೆ

 ಹೆಬ್ರಿ ಪಿಆರ್‌ಎನ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಅಮೃತ ಭಾರತಿ ಟ್ರಸ್ಟ್ ವಿಶ್ವಸ್ಥ ಎಚ್.ಯೋಗೀಶ್ ಭಟ್ ಧ್ವಜಾರೋಹಣಗೈದರು. ಪ್ರಮುಖರಾದ ಸಿಎ ಎಂ.ರವಿರಾವ್, ರಾಜೇಶ್ ನಾಯಕ್, ಶೈಲೇಶ್ ಕಿಣಿ, ಬಾಲಕೃಷ್ಣ ಮಲ್ಯ, ಸುಧೀರ್ ನಾಯಕ್, ಲಕ್ಷ್ಮಣ ಭಟ್ ಉಪಸ್ಥಿತರಿದ್ದರು.

Published on

ಹೆಬ್ರಿ: ಸ್ವಾತಂತ್ರೃ ಹೋರಾಟಗಾರರ ದೇಶಸೇವೆಯೊಂದಿಗೆ ತೆರೆಮರೆಯಲ್ಲಿ ಸೇವೆ ಮಾಡಿರುವ ಹಲವರಿದ್ದಾರೆ, ಅವರನ್ನೂ ಸ್ಮರಿಸಬೇಕು. ದೇಶದ ಸೇವೆ ಮಾಡಲು ಪ್ರತಿಯೊಬ್ಬ ವಿದ್ಯಾರ್ಥಿ ಕಟಿಬದ್ಧವಾಗಬೇಕು. ದೇಶದ ಬಗ್ಗೆ ಆತ್ಮಗೌರವದಿಂದ ನಿಸ್ವಾರ್ಥ ಸೇವೆ ಮಾಡಬೇಕು ಎಂದು ಅಮೃತ ಭಾರತಿ ಟ್ರಸ್ಟ್ ವಿಶ್ವಸ್ಥ ಎಚ್.ಯೋಗೀಶ್ ಭಟ್ ಹೇಳಿದರು.

ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ ಎಂ.ರವಿರಾವ್, ಅಮೃತ ಭಾರತಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ರಾಜೇಶ್ ನಾಯಕ್, ಅಮೃತ ಭಾರತಿ ವಿದ್ಯಾಲಯ ಅಧ್ಯಕ್ಷ ಶೈಲೇಶ್ ಕಿಣಿ, ವಿಶ್ವಸ್ಥರಾದ ಬಾಲಕೃಷ್ಣ ಮಲ್ಯ, ಸುಧೀರ್ ನಾಯಕ್, ಲಕ್ಷ್ಮಣ ಭಟ್, ವಸತಿ ನಿಲಯ ಸದಸ್ಯ ರಾಮಕೃಷ್ಣ ಆಚಾರ್ಯ, ಸಂಸ್ಥೆ ಮುಖ್ಯಸ್ಥರಾದ ಪ್ರಕಾಶ್ ಜೋಗಿ, ಅರುಣ್ ಕುಮಾರ್ ಎಚ್.ವೈ., ಅಪರ್ಣಾ ಆಚಾರ್, ಶಕುಂತಲಾ, ಪಿಆರ್‌ಒ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು. ವಿಣೀಶ್ ಅಮೀನ್ ನಿರೂಪಿಸಿದರು. ಚಂದ್ರಹಾಸ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net