ಕುಂದಾಪುರ: ವೃತ್ತಿ ತರಬೇತಿ ವಿಶೇಷ ಮಕ್ಕಳಿಗೆ ಹಾಗೂ ಅವರ ಪಾಲಕರಿಗೆ ಸ್ವಾವಲಂಬಿ ಜೀವನ ನಡೆಸಲು ಮಾರ್ಗದರ್ಶಿಯಾಗಿದೆ. ತರಬೇತಿಯಲ್ಲಿ ಕಲಿತ ವಸ್ತುಗಳನ್ನು ತಯಾರು ಮಾಡಿ ಅವುಗಳನ್ನು ಮಾರಾಟ ಮಾಡುವಲ್ಲಿ ನಿರಂತರತೆ ಕಾಯ್ದುಕೊಳ್ಳಬೇಕು. ವಿಶೇಷ ಮಕ್ಕಳನ್ನು ಈ ತರಬೇತಿಯಲ್ಲಿ ಹೇಗೆ ತೊಡಗಿಸಿಕೊಳ್ಳಬೇಕು ಎಂದು ಮಣಿಪಾಲ ಆಸರೆ ವಿಶೇಷ ಮಕ್ಕಳ ಶಾಲೆ ವೃತ್ತಿ ತರಬೇತುದಾರೆ ಪ್ರೇಮ ಪಾಟೀಲ್ ಹೇಳಿದರು.
ತಲ್ಲೂರು ್ಯಾಮಿಲಿ ಟ್ರಸ್ಟ್ ನಡೆಸುತ್ತಿರುವ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಪಾಲಕರಿಗಾಗಿ ಮೂರು ದಿನಗಳ ವೃತ್ತಿ ತರಬೇತಿ ಕಾರ್ಯಾಗಾರ ನಡೆಯಿತು.
ತಲ್ಲೂರು ್ಯಾಮಿಲಿ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ಟಿ. ಮಾತನಾಡಿದರು. ಟ್ರಸ್ಟಿ ಮನೋರಮ ಕೆ., ಎಸ್‌ಡಿಎಂ ಸಿ ಅಧ್ಯಕ್ಷ ವಿನಯ್ ಕುಮಾರ್, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಪ್ರೇಮ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.