ಪಿ.ಎಂ. ಸ್ವನಿಧಿಯಿಂದ ಸ್ವಾವಲಂಬಿ ಜೀವನ

 ಪಿ.ಎಂ. ಸ್ವನಿಧಿ ಯೋಜನೆಯ ಲೋಕ ಕಲ್ಯಾಣ ಮೇಳವನ್ನು ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷೆ ಕಮಲ, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ ಮೂಡುಬಗೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಿ.ಎಂ. ಸ್ವನಿಧಿ ಯೋಜನೆಯ ಲೋಕ ಕಲ್ಯಾಣ ಮೇಳವನ್ನು ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಉದ್ಘಾಟಿಸಿದರು. ಪುರಸಭಾ ಅಧ್ಯಕ್ಷೆ ಕಮಲ, ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ ಮೂಡುಬಗೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕೋವಿಡ್ ಬಳಿಕ ಸಂಕಷ್ಟದಲ್ಲಿದ್ದ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ಪುನಶ್ಚೇತನ ನೀಡುವ ಉದ್ದೇಶದಿಂದ ಆರಂಭಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಪಿ.ಎಂ. ಸ್ವನಿಧಿ ಲಕ್ಷಾಂತರ ವ್ಯಾಪಾರಿಗಳಿಗೆ ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ಸೋಮೇಶ್ವರ ಪುರಸಭೆ ಉಪಾಧ್ಯಕ್ಷ ರವಿಶಂಕರ್ ಅಭಿಪ್ರಾಯಪಟ್ಟರು.
ಪ್ರಧಾನಮಂತ್ರಿ ಸ್ವನಿಧಿ ಯೋಜನೆಯ 6 ವರ್ಷಗಳ ಸಂಭ್ರಮಾಚರಣೆ ಪ್ರಯುಕ್ತ ಸೋಮೇಶ್ವರ ಪುರಸಭೆಯಿಂದ ಬುಧವಾರ ಸೋಮೇಶ್ವರ ಪುರಸಭೆಯಲ್ಲಿ ನಡೆದ ‘ಲೋಕ ಕಲ್ಯಾಣ ಮೇಳ’ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಪ್ರಯುಕ್ತ ಬೀದಿಬದಿ ವ್ಯಾಪಾರಿಗಳ ಸಾಮಾಜಿಕ, ಆರ್ಥಿಕ ಸಮೀಕ್ಷೆ ನಡೆಸಿ ಅರ್ಹ ವ್ಯಾಪಾರಿಗಳನ್ನು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನ ಪಡೆಯುವಂತೆ ಸಂಬಂಧಿತ ಇಲಾಖೆಯೊಂದಿಗೆ ಸಂಪರ್ಕ ಕಲ್ಪಿಸಲಾಯಿತು. ಪುರಸಭಾ ಅಧ್ಯಕ್ಷೆ ಕಮಲ ಉದ್ಘಾಟಿಸಿದರು. ಮುಖ್ಯಾಧಿಕಾರಿ ಮತ್ತಡಿ ಮಾತನಾಡಿದರು. ಜಿಲ್ಲಾ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ ಮೂಡುಬಗೆ, ಸ್ಥಾಯಿ ಸಮಿತಿ ಅಧ್ಯಕ್ಷ ಪುರುಷೋತ್ತಮ ಗಟ್ಟಿ, ಹಿರಿಯ ಆರೋಗ್ಯ ನಿರೀಕ್ಷಕ ಲಿಲ್ಲಿ ನಾಯರ್, ಪರಿಸರ ಅಭಿಯಂತರ ಪುನೀತ್, ಸುರೇಖಾ, ವಿಶಾಲಾಕ್ಷಿ ಮೊದಲಾದವರು ಉಪಸ್ಥಿತರಿದ್ದರು. ವಿಶಾಲಾಕ್ಷಿ ಸ್ವಾಗತಿಸಿದರು. ಸಪ್ನಾ ನಿರೂಪಿಸಿದರು.

ಪಿ.ಎಂ. ಸ್ವನಿಧಿ ಯೋಜನೆ ಮೂಲಕ ಬೀದಿಬದಿ ವ್ಯಾಪಾರಿಗಳಿಗೆ ಸುಲಭ ಸಾಲ ಸೌಲಭ್ಯ ದೊರೆಯುತ್ತಿದ್ದು, ‘ಸ್ವನಿಧಿ ಸೇ ಸಮೃದ್ಧಿ’ ಅಭಿಯಾನದ ಮೂಲಕ ವಿವಿಧ ಕೇಂದ್ರ, ರಾಜ್ಯ ಸರ್ಕಾರಗಳ ಸಾಮಾಜಿಕ ಭದ್ರತಾ, ಕಲ್ಯಾಣ ಯೋಜನೆಗಳ ಪ್ರಯೋಜನ ತಲುಪಿಸಲಾಗುತ್ತಿದೆ.ಮತ್ತಡಿ ಮುಖ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net