ಕಿನ್ನಿಗೋಳಿ ಪಪಂ ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ ಅಧ್ಯಕ್ಷತೆ ವಹಿಸಿದ್ದರು. ನಗರ ಅಭಿಯಾನ ವ್ಯವಸ್ಥಾಪಕ ಅಚ್ಯುತ ನಾಯ್ಕ ಮೂಡುಬಗೆ ಪಿ.ಎಂ. ಸ್ವನಿಧಿ ಯೋಜನೆಯ ಉದ್ದೇಶ, ಅನುಷ್ಠಾನ, 2030ರವರೆಗೆ ಯೋಜನೆ ವಿಸ್ತರಣೆ, ಸಾಲ ಸೌಲಭ್ಯ, ಡಿಜಿಟಲ್ ವಹಿವಾಟಿನ ಪ್ರೋತ್ಸಾಹ, ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕುರಿತು ಮಾಹಿತಿ ನೀಡಿ, ಅರ್ಹ ಬೀದಿಬದಿ ವ್ಯಾಪಾರಸ್ಥರು ಯೋಜನೆ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.