ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ

 ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ನಡೆಯಿತು. ಪ್ರಮುಖರಾದ ಕುವಾರ ಖಾರ್ವಿ, ಯಶವಂತ ಖಾರ್ವಿ, ನಾಗೇಶ್ ಖಾರ್ವಿ ಮೊದಲಾದವರಿದ್ದರು.
ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ನಡೆಯಿತು. ಪ್ರಮುಖರಾದ ಕುವಾರ ಖಾರ್ವಿ, ಯಶವಂತ ಖಾರ್ವಿ, ನಾಗೇಶ್ ಖಾರ್ವಿ ಮೊದಲಾದವರಿದ್ದರು.
Published on
ಕುಂದಾಪುರ: ಕುಂದಾಪುರ ಹಾಗೂ ಬೈಂದೂರು ತಾಲೂಕು ನಾಡದೋಣಿ ಮೀನುಗಾರರ ಒಕ್ಕೂಟದಿಂದ ಸಮುದ್ರ ಪೂಜೆ ಬುಧವಾರ ನಡೆಯಿತು.
ಮರವಂತೆ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನ, ಶ್ರೀ ಗಂಗಾಧರೇಶ್ವರ ದೇವಸ್ಥಾನ ಹಾಗೂ ಅರಮಲಿಂಗೇಶ್ವರ ದೇವಸ್ಥಾನದಲ್ಲಿ ಮೀನುಗಾರರು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಶ್ರೀ ಮಹಾರಾಜ ಸ್ವಾಮಿ ವರಾಹ ದೇವಸ್ಥಾನದ ಎದುರಿನ ಸಮುದ್ರದಲ್ಲಿ ಗಂಗೆ ಪೂಜೆ ನೆರವೇರಿಸಿ, ಮತ್ಸ್ಯ ಸಮೃದ್ಧಿಗೆ ಪ್ರಾರ್ಥಿಸಿದರು. ಅರ್ಚಕ ನರಸಿಂಹ ಅಡಿಗ ಪೂಜಾ ವಿಧಿಗಳನ್ನು ನೆರವೇರಿಸಿದರು.
ಬೈಂದೂರು ವಲಯದ ನಾಡ ದೋಣಿ ಮೀನುಗಾರ ಸಂ ಅಧ್ಯಕ್ಷ ಕುವಾರ ಖಾರ್ವಿ, ಗಂಗೊಳ್ಳಿ ವಲಯದ ನಾಡ ದೋಣಿ ಮೀನುಗಾರರ ಸಂದ ಅಧ್ಯಕ್ಷ ಯಶವಂತ ಖಾರ್ವಿ, ಪ್ರಮುಖರಾದ ನಾಗೇಶ್ ಖಾರ್ವಿ, ಉಮೇಶ ಖಾರ್ವಿ, ಮರವಂತೆ ರಾಮ ಮಂದಿರ ವಾಜಿ ಅಧ್ಯಕ್ಷ ಸೋಮಯ್ಯ ಖಾರ್ವಿ, ಸುರೇಶ ಖಾರ್ವಿ ಮರವಂತೆ ಮತ್ತಿತರರು ಪಾಲ್ಗೊಂಡಿದ್ದರು.

ಸಾವಿರಾರು ನಾಡದೋಣಿ ಮೀನುಗಾರರು

ಕುಂದಾಪುರ, ಬೈಂದೂರು ಭಾಗದ ಕೋಡಿ, ಗಂಗೊಳ್ಳಿ, ಬೆಣ್ಗೆರೆ, ಕಂಚುಗೋಡು, ಹೊಸಪೇಟೆ, ಮರವಂತೆ, ತ್ರಾಸಿ, ಕೊಡೇರಿ, ಉಪ್ಪುಂದದ ಮಡಿಕಲ್, ಅಳ್ವೆಗದ್ದೆಯಲ್ಲಿ ನಾಡದೋಣಿಯ ಸಾವಿರಾರು ಮಂದಿ ಸಾಂಪ್ರದಾಯಿಕ ಮೀನುಗಾರರಿದ್ದಾರೆ. ಉಪ್ಪುಂದ ಭಾಗದಲ್ಲಿ 1,500 ನಾಡದೋಣಿಗಳಿದ್ದರೆ, ಗಂಗೊಳ್ಳಿಯಲ್ಲಿ 300 ಸಿಂಗಲ್, 35ಕ್ಕೂ ಮಿಕ್ಕಿ ಜೋಡಿ ದೋಣಿಗಳು ಸೇರಿದಂತೆ 600ಕ್ಕೂ ಮಿಕ್ಕಿ ನಾಡದೋಣಿಗಳಿವೆ. ಮರವಂತೆಯಲ್ಲಿ 100 ಜೋಡಿ ದೋಣಿ, 150ಕ್ಕೂ ಮಿಕ್ಕಿ ಸಿಂಗಲ್ ದೋಣಿಗಳಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net