ಹೆಜಮಾಡಿ ಜೆಟ್ಟಿ ಕಾಮಗಾರಿಯ ಪರಿಣಾಮ ಅಲೆಗಳು ಸಸಿಹಿತ್ಲು ಸಮುದ್ರ ತೀರಕ್ಕೆ ವೇಗವಾಗಿ ಅಪ್ಪಳಿಸಿ ಕಡಲ್ಕೊರೆತ ತೀವ್ರಗೊಂಡಿದೆ. ಸಸಿಹಿತ್ಲು ಸಮುದ್ರ ತೀರದ 19 ಕಡೆ ಬ್ರೇಕ್ ವಾಟರ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರೂ ಇದುವರೆಗೂ ಕಾಮಗಾರಿ ನಡೆದಿಲ್ಲ. ಬ್ರೇಕ್ ವಾಟರ್ ನಿರ್ಮಾಣ ಕಾಮಗಾರಿ ನಡೆದರೆ ಸರ್ಫಿಂಗ್ ಕ್ರೀಡೆಗೆ ಸಮಸ್ಯೆಯಾಗಬಹುದು ಎಂದು ಇಲಾಖೆ ಅಧಿಕಾರಿಗಳು ಕಾಮಗಾರಿ ನಡೆಸುತ್ತಿಲ್ಲ ಎಂದು ಹಳೆಯಂಗಡಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಧನರಾಜ್ ಕೋಟ್ಯಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.