ಹೆಬ್ರಿ: ಭಾರತೀಯ ಸಂಸ್ಕೃತಿಯ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಧರ್ಮ ಗ್ರಂಥಗಳು ಸಂಶೋಧನೆಗೆ ಇಂದಿಗೂ ಪ್ರಸ್ತುತವಾಗಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿರುವ ರಾವಾಯಣ, ಮಹಾಭಾರತ ಗ್ರಂಥಗಳನ್ನು ಅಧ್ಯಯನ ವಾಡಬೇಕು ಎಂದು ಪರೀಕ್ಷಾ ಸಂಯೋಜಕ ಮತ್ತು ಸಂಸ್ಥೆಯ ಸಂಸ್ಕೃತ ಶಿಕ್ಷಕ, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ಹೇಳಿದರು.
ಹೆಬ್ರಿಯ ಅಮೃತ ಭಾರತಿಯಲ್ಲಿ, ಬೆಂಗಳೂರಿನ ಭಾರತ ಸಂಸ್ಕೃತಿ ಪ್ರತಿಷ್ಠಾನ ನಡೆಸಿದ ರಾವಾಯಣ, ಮಹಾಭಾರತ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಮೃತ ಭಾರತಿ ವಸತಿ ನಿಲಯದ ಸದಸ್ಯ ರಾಮಕೃಷ್ಣ ಆಚಾರ್ಯ ಅಧ್ಯಕ್ಷತೆ ವಹಿಸಿ ವಾತನಾಡಿ, ಜೀವನದಲ್ಲಿ ಶಿಕ್ಷಣದ ಜತೆಗೆ ರಾಮ-ಕೃಷ್ಣರ ಆದರ್ಶವನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ವಿದ್ವಾನ್ ರಾವೇಂದ್ರ ಭಟ್ ಮುಟ್ಲುಪಾಡಿ ವಾತನಾಡಿ, ನಮ್ಮ ಅಭ್ಯುದಯಕ್ಕೆ ರಾಮನ ಆದರ್ಶ ಕೃಷ್ಣನ ನುಡಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಗ್ರಂಥಗಳ ಅಧ್ಯಯನ ವಾಡಬೇಕು. ನಿರಂತರ ಅಧ್ಯಯನದಿಂದ ನಮ್ಮ ಬುದ್ಧಿಶಕ್ತಿಯನ್ನು ಉತ್ಕ ೃಷ್ಟಗೊಳಿಸುತ್ತದೆ ಎಂದರು.
ಅಮೃತ ಭಾರತಿ ವಿದ್ಯಾಲಯದ ಆಂಗ್ಲ ವಾಧ್ಯಮ ಪ್ರೌಢಶಾಲೆಯ 165 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸಾಧಕ ವಿದ್ಯಾರ್ಥಿಗಳಾದ ಕಾವ್ಯ ಪೈ, ಗಗನ್ ಎಂ.ಆಚಾರ್ಯ, ಗಗನ್ಯಾ, ಸಿಯಾ ಶೆಟ್ಟಿ, ಇಂಪನಾ, ಪುಷ್ಕರ್ ಎಸ್.ಪೂಜಾರಿ ಅವರನ್ನು ಗೌರವಿಸಲಾಯಿತು.
ಸಂಸ್ಥೆ ಮುಖ್ಯಸ್ಥರಾದ ಅಪರ್ಣಾ ಆಚಾರ್, ಶಕುಂತಲಾ ಹಾಗೂ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿಜ್ಞಾನ ಶಿಕ್ಷಕಿ ಸೌಪರ್ಣಿಕಾ ಜೋಶಿ ನಿರೂಪಿಸಿ, ವಂದಿಸಿದರು.