ಆಚರಣೆಗಳ ಹಿಂದಿದೆ ವೈಜ್ಞಾನಿಕ ಚಿಂತನೆ

 ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಾಟ್ಯಂ ಅವಧಾರಯೇ ನಟರಾಜ ಪೂಜನ ಕಾರ್ಯಕ್ರಮ ನಡೆಯಿತು. ವಿದುಷಿ ಸೌಜನ್ಯಾ ಪಡುವೆಟ್ನಾಯ, ತಾರಾನಾಥ ಕೊಟ್ಟಾರಿ ಮೊದಲಾದವರಿದ್ದರು.
ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ಆಶ್ರಯದಲ್ಲಿ ನಾಟ್ಯಂ ಅವಧಾರಯೇ ನಟರಾಜ ಪೂಜನ ಕಾರ್ಯಕ್ರಮ ನಡೆಯಿತು. ವಿದುಷಿ ಸೌಜನ್ಯಾ ಪಡುವೆಟ್ನಾಯ, ತಾರಾನಾಥ ಕೊಟ್ಟಾರಿ ಮೊದಲಾದವರಿದ್ದರು.
Published on

ಬಂಟ್ವಾಳ: ಭಾರತೀಯ ಆಚಾರ-ವಿಚಾರ ಹಾಗೂ ಧಾರ್ಮಿಕ ನಂಬಿಕೆಗಳ ಹಿಂದೆ ವೈಜ್ಞಾನಿಕ ಮತ್ತು ತಾತ್ವಿಕ ಚಿಂತನೆ ಅಡಕವಾಗಿದೆ. ಜಗತ್ತು ನಿರಂತರ ಚಲನೆಯಲ್ಲಿ ಇರುವಂತೆ ನಟರಾಜನೂ ಚಲನೆಯ ಪ್ರತೀಕವಾಗಿದ್ದಾನೆ ಎಂದು ವಿದುಷಿ ಸೌಜನ್ಯಾ ಪಡುವೆಟ್ನಾಯ ಹೇಳಿದರು.

ಸಂಸ್ಕಾರ ಭಾರತಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಆಶ್ರಯದಲ್ಲಿ ಬಿ.ಸಿ.ರೋಡ್‌ನಲ್ಲಿ ನಾಟ್ಯಂ ಅವಧಾರಯೇ ನಟರಾಜ ಪೂಜನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕಾರ ಭಾರತಿ ಜಿಲ್ಲಾ ಅಧ್ಯಕ್ಷ ತಾರಾನಾಥ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗೌರವಾಧ್ಯಕ್ಷ ಸರಪಾಡಿ ಅಶೋಕ ಶೆಟ್ಟಿ, ಪ್ರಾಂತ ಕಾರ್ಯದರ್ಶಿ ನಾಗರಾಜ ಶೆಟ್ಟಿ, ಪ್ರಾಂತ ಉಪಾಧ್ಯಕ್ಷೆ ರೂಪಲೇಖಾ, ಪ್ರಾಂತ ಸಹಕೋಶ ಪ್ರಮುಖ್ ರಘುವೀರ ಘಟ್ಟಿ, ಸನಾತನ ನಾಟ್ಯಾಲಯದ ಮುಖ್ಯಸ್ಥ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಉಪಾಧ್ಯಕ್ಷರಾದ ಅನಿಲ್ ಪಂಡಿತ್, ದತ್ತಾತ್ರೇಯ ರಾವ್ ಉಪಸ್ಥಿತರಿದ್ದರು.
ಸಂಸ್ಕಾರ ಭಾರತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನುತಾ ಕೆ.ಸಾಲೆತ್ತೂರು ವಂದಿಸಿದರು. ವಿಜಯ ಶೆಟ್ಟಿ ಸಾಲೆತ್ತೂರು ಹಾಗೂ ಹರ್ಷಿತಾ ರೈ ಸಾಲೆತ್ತೂರು ನಿರೂಪಿಸಿದರು. ವಿದ್ವಾನ್ ಗೋಪಾಲಕೃಷ್ಣ, ಪ್ರವೀಣ್ ಶೆಟ್ಟಿ, ವಾರಿಜಾ ನಿರ್ಬೈಲು, ಶಂಕರಿ ಶರ್ಮ, ಸಂಧ್ಯಾ ಸಹಕರಿಸಿದರು.

ಸಾಂಸ್ಕೃತಿಕ ಕಲಾ ಸೇವೆ

ವೇದಘೋಷ, ವಾದ್ಯ ಸಂಗೀತ ಹಾಗೂ ನಾಟ್ಯ ಕಲಾವಿದರೊಂದಿಗೆ ಪಲ್ಲಕ್ಕಿಯಲ್ಲಿ ನಟರಾಜ ಮೂರ್ತಿ ಆಗಮನದ ಬಳಿಕ ವೇದಿಕೆಯಲ್ಲಿ ನಟರಾಜನ ಪ್ರತಿಷ್ಠಾಪನೆ, ಪುಷ್ಪಾರ್ಚನೆ ಹಾಗೂ ಆರತಿ ನೆರವೇರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿದುಷಿ ಪ್ರೀತಿಕಲಾ ಅವರಿಂದ ಗೀತಂ, ಚಿಣ್ಣರ ಲೋಕ ಚೆಂಡೆ ಬಳಗದ ವಾದ್ಯಸೇವೆ ಹಾಗೂ ವಿದ್ವಾನ್ ದೀಪಕ್ ಕುಮಾರ್ ಮತ್ತು ಬಳಗದ ನೃತ್ಯಸೇವೆಯ ಮೂಲಕ ನಟರಾಜನಿಗೆ ಕಲಾಸೇವೆ ಸಮರ್ಪಿಸಲಾಯಿತು. ಬ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net